Thursday, August 11, 2022

Latest Posts

ಸಂಸದೆಯಾಗಿ ಸುಮಲತಾ ಅಂಬರೀಷ್​ ಅವರು ಮಂಡ್ಯ ಜನತೆಯಲ್ಲಿ ಗೊಂದಲ ಸೃಷ್ಟಿಮಾಡುವುದು ಒಳ್ಳೆಯದಲ್ಲ: ನಿಖಿಲ್‌ ಕುಮಾರಸ್ವಾಮಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸಂಸದೆಯಾಗಿ ಸುಮಲತಾ ಅಂಬರೀಷ್​ ಅವರು ಮಂಡ್ಯ ಜನತೆಯಲ್ಲಿ ಗೊಂದಲ ಸೃಷ್ಟಿಮಾಡುವುದು ಒಳ್ಳೆಯದಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಕೆಆರ್‌ಎಸ್‌ ಡ್ಯಾಂ ಬಿರುಕು ಬಿಟ್ಟಿದೆ ಎಂದು ಹೇಳಿ ಮಂಡ್ಯ ಜನರಲ್ಲಿ ಗೊಂದಲವುಂಟುಮಾಡುತ್ತಿದ್ದಾರೆ. ಸಂಸದೆಯಾಗಿ ಗೊಂದಲ ಸೃಷ್ಟಿಮಾಡುವುದು ಒಳ್ಳೆಯದು ಅಲ್ಲ. ಬಿರುಕು ಬಿಟ್ಟಿರುವ ಬಗ್ಗೆ ಟೆಕ್ನಿಕಲ್ ಟೀಂ ಮತ್ತು ಸರ್ಕಾರ ಹೇಳಬೇಕು ಎಂದು J ನಿಖಿಲ್‌ ಹೇಳಿದ್ದಾರೆ.
2018 ರಲ್ಲಿ ಏಳಕ್ಕೆ ಏಳು ಕ್ಷೇತ್ರವನ್ನ ಜೆಡಿಎಸ್ ಗೆದ್ದಿದೆ. ಏಳು ಕ್ಷೇತ್ರದಲ್ಲೂ ಜನರು ಆರ್ಶಿವಾದ ಮಾಡಿದ್ದಾರೆ. ಹಾಗಾಗಿ, ಮಂಡ್ಯದ ಜನರ ಪರ ನಿಲ್ಲುವುದು ನಮ್ಮ ಧರ್ಮ. ಆಕ್ರಮ ಗಣಿಗಾರಿಕೆ ನಡೆಯುತ್ತಿದೆ ಅಂತಾದರೆ ರಾಜ್ಯ ಸರ್ಕಾರ ಯಾವ ರೀತಿ ಬೇಕಾದರೂ ಕ್ರಮ ತೆಗೆದುಕೊಳ್ಳಲಿ. ಆಕ್ರಮ ಗಣಿಗಾರಿಕೆ ಯಾರೇ ಮಾಡುತ್ತಿದ್ದರೂ ನಾವು ಕೈ ಜೋಡಿಸುವುದಿಲ್ಲ. ನಮ್ಮ ಪಕ್ಷದವರೇ ಇದ್ದರೂ ಸಪೋರ್ಟ್ ಮಾಡುವುದಿಲ್ಲ ಎಂದುನಿಖಿಲ್‌ ಕುಮಾರಸ್ವಾಮಿ ಹೇಳಿದರು.
ಅಯ್ಯೋ ಪಾಪ ಏನೋ ವೀಕ್ಷಣೆ ಮಾಡಲು ಇವತ್ತು ಹೋಗಿದ್ದಾರೆ. ಒಳ್ಳೇಯದು ಆಗಲಿ ಅವರಿಗೆ. ಡ್ಯಾಂ ಗೆ ಒಂದು ಇತಿಹಾಸ ಇದೆ. ವೈಯಕ್ತಿಕ ದ್ವೇಷ ಸಾಧಿಸಲು ಈ ಮನಸ್ಥಿತಿ ಇಟ್ಟುಕೊಂಡು ಮಾತನಾಡುವುದು ಇವರಿಗೆ ಶೋಭೆ ತರಲ್ಲ. ನಮ್ಮ ಸಂಸ್ಕೃತಿ ಏನು ಎಂಬುದು ಇಡೀ ರಾಜ್ಯದ ಜನ ಅರ್ಥ ಮಾಡಿಕೊಂಡಿದ್ದಾರೆ. ಈ ರೀತಿಯ ಹೇಳಿಕೆಗಳನ್ನ ಕೊಟ್ಟು, ಅದನ್ನೇ ಅಸ್ತ್ರವಾಗಿ ಬಳಸಿಕೊಂಡು ಮುಂದಿನ ಚುನಾವಣೆಯಲ್ಲಿ ಸ್ವರ್ಧಿಸುವ ಮನಸ್ಥಿತಿಗೆ ಬಂದಂತೆ ಇದೆ, ಮೊದಲು ಸಂಸದರಾಗಿ ಜನರ ಋಣ ತೀರಿಸಲಿ ಎಂದು ಸಂಸದೆ ಸುಮಲತಾ ಅಂಬರೀಷ್​ ಅವರ ನಡೆಯ ಬಗ್ಗೆ ನಿಖಿಲ್‌ ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss