Monday, August 8, 2022

Latest Posts

ಗೋವುಗಳ ರಕ್ಷಣೆ ಮಾಡುವುದು ನಮ್ಮ ಹೊಣೆ : ಲಕ್ಷ್ಮಿಕಾಂತ ಸ್ವಾಧಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಕಲಬುರಗಿ:

ಮುಸ್ಲೀಂ ಸಮುದಾಯದ ಬಕ್ರೀದ್ ಹಬ್ಬದ ದಿನದ ಹಿನ್ನೆಲೆಯಲ್ಲಿ ಮುಂಚಿತವಾಗಿ ಗೋವುಗಳನ್ನು ರಕ್ಷಣೆ ಮಾಡುವ ಕೆಲಸವನ್ನು ಸಕಾ೯ರ ಮಾಡಬೇಕೆಂದು ಹಿಂದೂ ಜಾಗೃತಿ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ ಸ್ವಾಧಿ ಹೇಳಿದ್ದಾರೆ.

ಅವರು ಗುರುವಾರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರ ಕ್ಕೆ ಮನವಿ ಮಾಡಿ ಮಾತನಾಡಿ, ಗೋ ಹಂತಕರು ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದು, ಹೀಗಿದ್ದರು ಪೋಲಿಸ್ ಇಲಾಖೆ ಕೈಕಟ್ಟಿ ಕುಳಿತುಕೊಂಡಿದೆ ಎಂದರು.

ಕಳೆದ ವಷ೯ ಮಾಡಿದ ರೀತಿಯಲ್ಲಿ ಪೋಲಿಸ್ ಇಲಾಖೆಯಿಂದ ಸೇಡಂ ರಸ್ತೆ, ಹುಮನಾಬಾದ್ ರಸ್ತೆ, ಆಳಂದ ರಸ್ತೆ, ಜೇವರ್ಗಿ ರಸ್ತೆ, ಅಫಜಲಪುರ ರಸ್ತೆ ಹಾಗೂ ಶಹಾಬಾದ್ ಕ್ರಾಸ್ ಬಳಿ ಚೆಕ್ ಪೋಸ್ಟ್ ನಿಮಿ೯ಸಬೇಕೆಂದು ಆಗ್ರಹಿಸಿದರು.

ಗೋ ಹತ್ಯೆ ನಿಷೇಧ ಮಾಡಿ ಸಕಾ೯ರ ಆದೇಶ ಹೊರಡಿಸಿದರು,ಜಿಹಾದಿಗಳು ಅಕ್ರಮವಾಗಿ ಗೋವುಗಳನ್ನು ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದು, ಖಂಡನೀಯ ವಿಷಯವಾಗಿದೆ. ಕೂಡಲೇ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ನಗರ ಪೋಲಿಸ್ ಆಯುಕ್ತ ರೊಂದಿಗೆ ಚಚೆ೯ ಮಾಡಿ ಎಲ್ಲ ಕಡೆಗೂ ಚೆಕ್ ಪೋಸ್ಟ್ ನಿಮಾ೯ಣ ಮಾಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸುನೀಲ್ ಶಿಕೆ೯, ಸಂತೋಷ ಹಿರೇಮಠ, ಅಶೋಕ್ ಹಲಸೂರು, ಶೀಲಾ ಮಂಗಳಮುಖಿ, ಅಭಿಶೇಕ ತಾರಾಪೂರ, ಧಶರಥ ಇಂಗೋಳೆ, ಮಹಾದೇವ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss