ಹೊಸ ದಿಗಂತ ಆನ್ಲೈನ್ ಡೆಸ್ಕ್:
‘ಆತ್ಮೀಯರೆ ನನಗೆ ನೀವು ನಿಮಗೆ ನಾನು ಇನ್ನು ಮುಂದೆ, ಇನ್ನು ಮುಂದೆ ನನ್ನ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮ, ಭೇಟಿ, ಹರಟೆ ನನ್ನಿಂದ ಇರುವುದಿಲ್ಲ! ಮುಂದೆ ನನ್ನ ಸಿನಿಮಾ ಝೀ ಟಿವಿ ಶೋಗೆ ಮೀಸಲು ಬದುಕು! ಕಾರಣ ತುಂಬ ತಾಮಸವಾಗಿದೆ ನಮ್ಮರಂಗ, ದೊಡ್ಡವರು ಬದುಕಿದಾಗಲೇ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯ ಆಗಿದೆ ರಂಗ”
ಹೀಗೆಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ ಕನ್ನಡದ ಹಿರಿಯ ನಟ ಜಗ್ಗೇಶ್. ತನ್ನ ವೃತ್ತಿ ಜೀವನದುದ್ದಕ್ಕೂ ಎಲ್ಲರನ್ನೂ ನಗಿಸಿದ್ದ ನಟನಿಗೆ ಇದೆಂತಾ ನೋವು!
ಹಿರಿಯ ನಟ ಜಗ್ಗೇಶ್ ಹಾಗೂ ನಟ ದರ್ಶನ್ ಅಭಿಮಾನಿಗಳ ನಡುವೆ ನಡೆದ ಕೆಲವು ಅಹಿತಕರ ಬೆಳವಣಿಗೆಗಳು ತಣ್ಣಗಾಗುವ ಲಕ್ಷಣ ಗೋಚರಿಸುತ್ತಿಲ್ಲ. ಇತ್ತ ಈ ವಿವಾದ ಬಗ್ಗೆ ಇದುವರೆಗೂ ನಟ ದರ್ಶನ್ ಪ್ರತಿಕ್ರಿಯಿಸಿಲ್ಲ. ಈ ಬೆಳವಣಿಗೆಗಳು ಅವರ ಗಮನಕ್ಕೆ ಬಂದಿಲ್ಲವೋ ಅಥವಾ ಸಣ್ಣ ವಿಚಾರ ಅಂತ ಸುಮನ್ನಿದ್ದಾರೋ ಗೊತ್ತಿಲ್ಲ. ಈಗಲಾದರೂ ನಟ ದರ್ಶನ್ ಪ್ರತಿಕ್ರಿಯೆ ನೀಡಿ ತಮ್ಮ ಅಭಿಮಾನಿಗಳನ್ನು ತಣ್ಣಗಾಗಿಸುವ ಅನಿವಾರ್ಯತೆ ಇದೆ. ಇದೇ ಮಾತನ್ನು ಮತ್ತೋರ್ವ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಕೂಡಾ ಖಾಸಗಿ ವಾಹಿನಿ ಜೊತೆ ಮಾತನಾಡಿ ಸಲಹೆ ಕೊಟ್ಟಿದ್ದಾರೆ.
ದರ್ಶನ್ ಹಾಗೂ ಜಗ್ಗೇಶ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಬಹಳ ಚೆನ್ನಾಗಿಯೇ ಇದ್ದಾರೆ ಎನ್ನುತ್ತದೆ ಸ್ಯಾಂಡಲ್ವುಡ್ ಅಂಗಳ. ಅಷ್ಟೇ ಅಲ್ಲ, ದರ್ಶನ್ ಹುಟ್ಟುಹಬ್ಬಕ್ಕೂ ಜಗ್ಗೇಶ್ ಟ್ವಿಟ್ಟರ್ ಮೂಲಕ ಶುಭ ಕೋರಿದರು. ಹುಟ್ಟುಹಬ್ಬದ ಎರಡು ದಿನ ಹಿಂದೆ ಈ ಆಡಿಯೋ ಕ್ಲಿಪ್ ಲೀಕ್ ಆಗಿತ್ತು. ಆದರೂ ಇಂತಹ ಬೆಳವಣಿಗೆ ನಡೆದಿದ್ದರ ಹಿಂದಿನ ಉದ್ದೇಶ ಏನು ಎಂಬುದು ಎಲ್ಲರ ಪ್ರಶ್ನೆ.
#DBossbirthdayCDP
ಹುಟ್ಟುಹಬ್ಬದ ಶುಭಾಶಯಗಳು
ನೂರ್ಕಾಲ ಸುಖವಾಗಿ ಬಾಳಿ.
God bless:) pic.twitter.com/4OuLEMUDNs— ನವರಸನಾಯಕ ಜಗ್ಗೇಶ್ (@Jaggesh2) February 13, 2021