ಹೊಸದಿಗಂತ ವರದಿ ಮಂಡ್ಯ :
ಮಕ್ಕಳಿಗೆ ಸಂಸ್ಕಾರ ನೀಡುವುದು ಮಾತೆಯರ ಜವಾಬ್ದಾರಿಯಾಗಿದೆ. ಇಹಂದೆ ಇದ್ದ ಹಾಗೆ ಈಗಿನ ಮಕ್ಕಳಿಗೆ ಸಂಸ್ಕಾರ ಸಿಗುತ್ತಿಲ್ಲ ಎಂದು ಮರಲಿಂಗನದೊಡ್ಡಿಯ ಶ್ರೀ ಸಿದ್ದಲಿಂಗೇಶ್ವರಸ್ವಾಮಿ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ವಿಕಾಸ ವತಿಯಿಂದ ತಾಲೂಕಿನ ಮರಲಿಂಗನದೊಡ್ಡಿ ಗ್ರಾಮದ ಶ್ರೀ ಮಾಧವ ವಿದ್ಯಾಲಯದಲ್ಲಿ ನಡೆದ ಗ್ರಾಮ ಸಂಗಮ ಕಾರ್ಯಕ್ರಮದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಕ್ಕಳಿಗೆ ಸಂಸ್ಕಾರ ನೀಡುವುದರ ಜೊತೆಗೆ ಗ್ರಾಮದಲ್ಲಿ ಪ್ರತಿಯೊಬ್ಬರೂ ನಾಟಿ ಹಸುವನ್ನು ಸಾಕುತ್ತಿದ್ದರು. ಅದರ ಗೊಬ್ಬರದಿಂದ ಬೆಳೆಯನ್ನು ಬೆಳೆಯುತ್ತಿದ್ದರು. ಸನಾತನ ಧರ್ಮದ ಸಂಸ್ಕೃತಿ ಬೆಲೆಸುವುದು ಎಲ್ಲರ ಕರ್ತವ್ಯ. ಅಂತಹ ಶಕ್ತಿ ಸಾಮರ್ಥ್ಯವನ್ನು ಜಗನ್ಮಾತೆ ಭಾರತಾಂಬೆ ನೀಡಲಿ ಎಂದು ತಿಳಿಸಿದರು.
ಮನುಷ್ಯ ಜನ್ಮ ತುಂಬಾ ಪವಿತ್ರವಾದದ್ದು, 84 ಲಕ್ಷ ಜೀವರಾಶಿಗಳಾಗಿ ಹುಟ್ಟಿದ ನಂತರ ಬಂದಿರುವುದು ಮನುಷ್ಯಜನ್ಮ. ಇಂತಹ ಜನ್ಮವನ್ನು ನಾವು ಸಾರ್ಥಕ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.