ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸದನದಲ್ಲಿ ಸಭಾಧ್ಯಕ್ಷರ ಏಕಪಕ್ಷೀಯ ವರ್ತನೆ ಬಗ್ಗೆ ಗುರುವಾರ ರಾಜ್ಯಪಾಲರ ಗಮನ ಸೆಳೆಯಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ಅವರು ಗುರುವಾರ ರಾಜ್ಯಪಾಲರ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಿದ ಬಳಿಕ, ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ಪೇಪರ್ ಹರಿದು ಹಾಕಿದ್ದಕ್ಕೆ ಅಮಾನತು ಮಾಡುವುದಾದರೆ ಹಿಂದೆ ಕುರ್ಚಿ ಎಳೆದುದಕ್ಕೆ ವಜಾ ಮಾಡಬೇಕಿತ್ತು ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.
ಸದನದ ಸಭ್ಯತೆ ಕಾಪಾಡುವುದು ಸ್ಪೀಕರ್ ಹೊಣೆ ಆಗಿರುತ್ತದೆ. ಅದೇ ರೀತಿ ಆಡಳಿತ ಪಕ್ಷದ ಲೋಪದೋಷಗಳನ್ನು ತಿಳಿಸುವುದು ವಿಪಕ್ಷಗಳ ಜವಾಬ್ದಾರಿ ಆಗಿದೆ ಎಂದು ತಿಳಿಸಿದರು. ಸರಕಾರ ತಪ್ಪು ದಾರಿಯಲ್ಲಿದ್ದರೆ ಅದನ್ನು ತಿಳಿಸಿ ಸರಿದಾರಿಗೆ ತರಬೇಕಾಗುತ್ತದೆ ಎಂದು ನುಡಿದರು.
ಸರಕಾರ ತನ್ನ ಮನಸ್ಸಿಗೆ ಬಂದಂತೆ ವರ್ತಿಸಬಾರದು. ಮೊನ್ನೆ ಬಂದವರು ಸರಕಾರದ ಅತಿಥಿಗಳಲ್ಲ ಎಂದು ಗಮನ ಸೆಳೆದರು. ಐಎಎಸ್, ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸಿ ಸೇವಾನಿಯಮ ಉಲ್ಲಂಘಿಸಿದ್ದಾರೆ ಎಂದು ಆಕ್ಷೇಪಿಸಿದರು.