ಪಿತ್ತ ಹೆಚ್ಚಾದರೂ ಸಮಸ್ಯೆಯೇ, ಪಿತ್ತದ ಅಂಶ ಇಲ್ಲದಿದ್ದರೂ ಸಮಸ್ಯೆಯೇ. ಯಾವಾಗಲೂ ಪಿತ್ತ ನಾರ್ಮಲ್ ಆಗಿ ಇರಬೇಕು. ನಾವು ಸೇವಿಸುವ ಆಹಾರಗಳಿಂದ ಪಿತ್ತ ಹೆಚ್ಚು ಕಡಿಮೆ ಆಗುತ್ತದೆ. ಪಿತ್ತ ಹೆಚ್ಚಾದರೆ ಆಲ್ಸರ್ ಆಗುವ ಸಾದ್ಯತೆ ಇರುತ್ತದೆ. ಒಮ್ಮೆ ಅಲ್ಸರ್ ಬಂದರೆ ಮುಂದೆ ಉಪ್ಪು, ಹುಳಿ, ಖಾರ ಯಾವುದನ್ನೂ ಸೇವಿಸುವ ಹಾಗಿಲ್ಲ. ಇಲ್ಲಿದೆ ಪಿತ್ತದ ಲಕ್ಷಣ…
ತಲೆ ನೋವು:
ಪಿತ್ತ ಹೆಚ್ಚಾದಾಗ ಅರೆ ತಲೆನೋವು ಬರುತ್ತದೆ. ಒಂದೇ ಕಡೆಯಲ್ಲಿ ತಲೆ ನೋವಾಗುತ್ತದೆ. ಕಣ್ಣಗಳ ಮಧ್ಯೆ, ಮೂಗಿನ ಮೇಲಕ್ಕೆ ಒತ್ತಿಕೊಂಡರೆ ನೋವು ಕಾಣಿಸುತ್ತದೆ.
ವಾಂತಿ:
ಬೆಳಗ್ಗೆ ಎದ್ದ ತಕ್ಷಣ ವಾಂತಿಯಾಗುತ್ತದೆ. ಹಳದಿ ಬಣ್ಣದ ಕಹಿ ವಾಂತಿಯಾಗುತ್ತದೆ.
ಗುಳ್ಳೆ:
ಪಿತ್ತ ಸಿಕ್ಕಾಪಟ್ಟೆ ಹೆಚ್ಚಾದಾಗ ಮೈ ಮೇಲೆ ಗುಳ್ಳೆಗಳಾಗುತ್ತದೆ.
ಎದೆ ಉರಿ:
ಪಿತ್ತ ಹೆಚ್ಚಾದಾಗ ಆಹಾರ ಸೇವಿಸುವುದು ಸ್ವಲ್ಪ ತಡವಾದರೂ ಎದೆ ಉರಿಯಾಗುತ್ತದೆ.
ಹುಳಿ ತೇಗು:
ಪದೇ ಪದೇ ಹುಳಿ ತೇಗು ಬರುತ್ತಿರುತ್ತದೆ.
ಅಂಗೈ ನೋವು:
ಹೆಬ್ಬೆರಳಿರುವ ಜಾಗದಲ್ಲಿ ಅಂಗೈಯನ್ನು ಒತ್ತಿಕೊಂಡಾಗ ನೋವು ಕಾಣಿಸುತ್ತದೆ. ಇದೂ ಕೂಡ ಪಿತ್ತದ ಲಕ್ಷಣವೇ.