spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇದು ವಿಶ್ವದ ಅತೀ ಅಪಾಯಕಾರಿ ಉದ್ಯಾನವನ: ಇಲ್ಲಿನ ಗಾಳಿ ಸೇವಿಸಿದವರ‍್ಯಾರೂ ಬದುಕುಳಿದಿಲ್ಲ!

- Advertisement -Nitte

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಜಗತ್ತಿನಲ್ಲಿ ನಮಗೆ ಗೊತ್ತಿಲ್ಲದ ಎಷ್ಟೋ ವಿಷಯಗಳಿವೆ. ಕುತೂಹಲಕಾರಿ ಸ್ಥಳಗಳಿವೆ. ಇದರ ಬಗ್ಗೆ ದೂರದಿಂದ ಕುಳಿತು ತಿಳಿದುಕೊಳ್ಳೋದಕ್ಕೆ ಹೆಚ್ಚು ಮಂದಿ ಇಷ್ಟಪಡುತ್ತಾರೆ.  ಎಲ್ಲೋ ಕೆಲವರು ಮಾತ್ರ ಧೈರ್ಯ ಮಾಡಿ ಆ ಸ್ಥಳ ನೋಡಬೇಕು ಎಂದು ಹೋಗಿ ಬರುತ್ತಾರೆ.

ಸಾಮಾನ್ಯವಾಗಿ ನಾವು ಪಾರ್ಕ್‌ಗಳಿಗೆ ಹೋಗೋದೇಕೆ? ಒಳ್ಳೆಯ ಗಾಳಿ ಪಡೆಯೋದಕ್ಕೆ ಅಲ್ವಾ? ಆದರೆ ಇಂಗ್ಲೆಂಡ್‌ನಲ್ಲಿ ಒಂದು ಪಾರ್ಕ್‌ ಇದೆ. ಇಲ್ಲಿನ ಗಾಳಿ ಸೇವನೆ ಮಾಡಿದ್ರೆ ಅಲ್ಲೇ ಪ್ರಾಣ ಹೋಗೋದು ಗ್ಯಾರೆಂಟಿ.

ಈ ಉದ್ಯಾನವನದ ಹೆಸರು ದಿ ಅಲ್ನ್ವಿಕ್‌ ಪಾಯ್ಸನ್‌ ಗಾರ್ಡನ್‌. ಇಲ್ಲಿಗೆ ಹೋಗೋದಕ್ಕೆ ಜನ ಈಗಲೂ ಭಯ ಪಡ್ತಾರೆ. ಈ ಉದ್ಯಾನವನದ ಗಾಳಿಯಲ್ಲಿ ವಿಷಕಾರಿ ಅಂಶ ಇದೆಯೋ ಇಲ್ಲವೋ ಎಂದು ಪರೀಕ್ಷಿಸಲು ಹೋದವರ್ಯಾರೂ ಮರಳಿ ಬಂದಿಲ್ಲವಂತೆ!

Step Inside the World's Most Dangerous Garden (If You Dare) | Travel |  Smithsonian Magazineಯುನೈಟೆಡ್‌ ಕಿಂಗ್‌ಡಮ್‌ ನಾರ್ಥ್‌ಂಬಲ್ರ್ಯಾಂಡ್‌ ನಲ್ಲಿರುವ ಪಾಯ್ಸನ್‌ ಗಾರ್ಡನ್‌ಗೆ ಹೆಚ್ಚಾಗಿ ಜನ ಹೋಗೋದಿಲ್ಲ. ಹೋದರೂ ಬಹಳ ದೂರದಲ್ಲಿ ನಿಂತು ಈ ಗಾರ್ಡನ್‌ ಇರೋದು ನಿಜವಾ ನೋಡಿಕೊಂಡು ಬರುತ್ತಾರೆ. ಇದು ಜಗತ್ತಿನ ಅತೀ ಅಪಾಯಕಾರಿ ಉದ್ಯಾನವನವಾಗಿದೆ. ಆದರೂ ಇದು ಇಂಗ್ಲೆಂಡ್‌ನ ಪ್ರಮುಖ ಆಕರ್ಷಣೀಯ ಸ್ಥಳ. ಇಲ್ಲಿ ವಿವಿಧ ಜಾತಿಯ ಸಸ್ಯಗಳು, ಗುಲಾಬಿ. ಕ್ಯಾಸ್ಕೇಡಿಂಗ್‌ ಕಾರಂಜಿಗಳು ಇವೆ. ಇದು ಜನರನ್ನು ತನ್ನತ್ತ ಕೈ ಬೀಸಿ ಕರೆಯುತ್ತದೆ.

Poison Garden Curates Medicine's Medieval Roots : Shots - Health News : NPRಪಾಯ್ಸನ್‌ ಗಾರ್ಡನ್‌ ಪ್ರವೇಶ ದ್ವಾರದಲ್ಲಿ ಕಪ್ಪು ಬಣ್ಣದ ಕಬ್ಬಿಣದ ಬಾಗಿಲಿದೆ. ಆದರೆ ಈ ಬಾಗಿಲ ಸುತ್ತ ಬಣ್ಣಬಣ್ಣದ ಹೂಗಳಿವೆ. ಇದನ್ನು ನೋಡಿದರೆ ಯಾರಿಗಾದರೂ ಕಿತ್ತು ಮನೆಗೊಯ್ಯುವ ಅಥವಾ ವಾಸನೆ ನೋಡುವ ಮನಸ್ಸಾಗುತ್ತದೆ. ಇದೇ ಕಾರಣಕ್ಕೆ ಬಾಗಿಲ ಬಳಿಯ ಬೋರ್ಡ್‌ ಒಂದನ್ನು ಹಾಕಲಾಗಿದೆ. ಇಲ್ಲ ಹೂವುಗಳನ್ನು ಕೀಳುವುದು, ವಾಸನೆ ನೋಡುವುದು ನಿಷೇಧ ಎನ್ನುವ ಬೋರ್ಡ್‌ ಇದೆ. ಜೊತೆಗೆ ಡೇಂಜರ್‌ ಚಿಹ್ನೆಯನ್ನೂ ಹಾಕಿದ್ದಾರೆ. 14 ಎಕರೆ ಇರುವ ಈ ಉದ್ಯಾನವನದಲ್ಲಿ 700 ವಿಷಕಾರಿ ಗಿಡಗಳಿವೆ.

Step Inside the World's Most Dangerous Garden (If You Dare) | Travel |  Smithsonian Magazineಈ ಹಿಂದೆ ಶತ್ರುಗಳನ್ನು ಕೊಲ್ಲಲು ವಿಷದ ಗಿಡಗಳನ್ನು ಬಳಸಲಾಗುತ್ತಿತ್ತು. ಈ ಗಾರ್ಡನ್‌ಗೆ ಈವರೆಗೂ ಧೈರ್ಯ ಮಾಡಿ ಬಂದ 100ಕ್ಕೂ ಹೆಚ್ಚು ಮಂದಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಆದರೆ ಇದರ ಸತ್ಯಾಸತ್ಯತೆ ಬಗ್ಗೆ ಯಾರಿಗೂ ಮಾಹಿತಿಯಿಲ್ಲ!

 

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss