Saturday, February 4, 2023

Latest Posts

‘ನಾಟು ನಾಟು’ ಹಾಡು ಬರೆಯೋಕೆ 19 ತಿಂಗಳು ಬೇಕಾಯ್ತಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡಿನ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ. ಈ ಹಾಡಿಗೆ 2023 ರ ಗೋಲ್ಡನ್ ಗ್ಲೋಬ್‌ನಲ್ಲಿ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿ ದೊರಕಿದೆ. ಭಾರತೀಯ ಚಿತ್ರರಂಗದಲ್ಲಿ ಇದೊಂದು ದೊಡ್ಡ ಸಾಧನೆಯಾಗಿದೆ.

ಇದೀಗ ಹಾಡನ್ನು ಬರೆಯೋದಕ್ಕೆ ಬರೋಬ್ಬರಿ 19 ತಿಂಗಳು ಬೇಕಾಯ್ತು ಎಂದು ಗೀತರಚನೆಕಾರ ಚಂದ್ರಬೋಸ್ ಅವರು ಹೇಳಿದ್ದಾರೆ.

ಸಿಕ್ಕಾಪಟ್ಟೆ ಖುಷಿಯಾಗಿದೆ. ಈ ಹಾಡು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದಿರೋದು ದೊಡ್ಡ ವಿಷಯ, ನಿರೀಕ್ಷೆ ಖಂಡಿತ ಇರಲಿಲ್ಲ. ಇಂಥ ದೊಡ್ಡ ಸಿನಿಮಾಕ್ಕೆ ಹಾಡು ಬರೆಯೋದಕ್ಕೆ ಅವಕಾಶ ಮಾಡಿಕೊಟ್ಟ ತಂಡಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.

ಅರ್ಧ ದಿನದಲ್ಲಿ ಶೇ.90ರಷ್ಟು ಹಾಡು ಬರೆದಾಗಿತ್ತು ಆದರೆ ಉಳಿದ 10% ಬರೆಯೋದಕ್ಕೆ ವರ್ಷಗಳೇ ಬೇಕಾಯ್ತು. ಅಷ್ಟು ಕಷ್ಟಪಟ್ಟಿದ್ದಕ್ಕೂ ಈಗ ಸಾರ್ಥಕವಾಯ್ತು ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!