ಪ್ರಧಾನಿ ಜೊತೆ ವೇದಿಕೆ ಹಂಚಿಕೊಂಡಿದ್ದು ನನ್ನ ಸೌಭಾಗ್ಯ: ಫೋಟೋ ಪೋಸ್ಟ್ ಮಾಡಿ ಖುಷಿಪಟ್ಟ ನಟಿ ನವ್ಯಾ ನಾಯರ್!​

ಹೊಸದಿಗಂತ ಡಿಜಿಟಲ್‌ ಡೆಸ್ಕ್

ದೇವರ ಸ್ವಂತ ನಾಡು ಕೇರಳಕ್ಕೆ ಎರಡು ದಿನ ಹಿಂದೆ ಪ್ರಧಾನಿ ಮೋದಿ ಅವರು ಭೇಟಿ ನೀಡಿದ್ದು, ಈ ವೇಳೆ ಕೊಚ್ಚಿಯಲ್ಲಿ ನಡೆದ ಯುವಂ 2023 ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದರು.

ಈ ಕಾರ್ಯಕ್ರಮದಲ್ಲಿ ಮಲಯಾಳಂ ಸಿನಿಮಾ ತಾರೆಯರಾದ ಉನ್ನಿ ಮುಕುಂದನ್​, ನವ್ಯಾ ನಾಯರ್​ ಮತ್ತು ಅಪರ್ಣಾ ಬಾಲಮುರಳಿ ಸೇರಿದಂತೆ ಹಲವು ಕಲಾವಿದರು ಸಹ ಮೋದಿ ಜೊತೆ ವೇದಿಕೆ ಹಂಚಿಕೊಂಡರು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಮೋದಿ ಜತೆ ಮಲಯಾಳಂ ನಟ-ನಟಿಯರು ಇರುವ ಫೋಟೋಗಳು ವೈರಲ್​ ಆಗಿವೆ.

ಫೋಟೋ ಕಂಡು ಕೆಲವರು ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ನವ್ಯಾ ಅವರಿಂದ ನಾವು ಇದನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ಇನ್ನು ಕೆಲವರು ಹಣಕ್ಕಾಗಿ ಅಪರ್ಣಾ ಬಾಲಮುರಳಿ ಮತ್ತು ನವ್ಯಾ ಅಂಥವರು ಕಾರ್ಯಕ್ರಮದಲ್ಲಿ ಭಾಗಹಿಸಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

ಜಾಲತಾಣದಲ್ಲಿ ಸಾಕಷ್ಟು ಟ್ರೋಲ್​ ಆದರೂ ಯಾವುದಕ್ಕೂ ಕ್ಯಾರೆ ಎನ್ನದ ನವ್ಯಾ ನಾಯರ್​, ಇದೀಗ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪ್ರಧಾನಿ ಮೋದಿ ಜತೆ ತೆಗೆಸಿಕೊಂಡಿರುವ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದು ನನ್ನ ಸೌಭಾಗ್ಯ ಎಂದು ಅಡಿಬರಹ ನೀಡುವ ಮೂಲಕ ಟ್ರೋಲಿಗರಿಗೆ ನವ್ಯಾ ತಿರುಗೇಟು ನೀಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!