ತಿಹಾರ್ ಜೈಲಿನಲ್ಲಿ ಸತ್ಯೇಂದ್ರ ಜೈನ್‌ಗೆ ಮಸಾಜ್ ಮಾಡಿದ್ದು ಫಿಸಿಯೋಥೆರಪಿಸ್ಟ್‌ ಅಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ಮಸಾಜ್ ಪಡೆದಿದ್ದು ಫಿಸಿಯೋಥೆರಪಿಸ್ಟ್‌ನಿಂದ ಅಲ್ಲ ರೇಪಿಸ್ಟ್‌ನಿಂದ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಸತ್ಯೇಂದ್ರ ಜೈನ್‌ಗೆ ತಿಹಾರ್ ಜೈಲಿನಲ್ಲಿ ವಿಐಪಿ ಉಪಚಾರ ನೀಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸತ್ಯೇಂದ್ರ ಜೈನ್‌ಗೆ ಜೈಲಿನಲ್ಲಿ ಫಿಸಿಯೋಥೆರಪಿ ಮಾಡಲಾಗುತ್ತಿತ್ತು. ಅದು ಮಸಾಜ್ ಅಲ್ಲ, ರಾಯಲ್ ಟ್ರೀಟ್‌ಮೆಂಟ್ ಅಲ್ಲ ಎಂದು ಹೇಳಿದ್ದರು.

 

ಆದರೆ ಮಸಾಜ್ ಮಾಡುತ್ತಿರುವ ವ್ಯಕ್ತಿ ಫಿಸಿಯೋಥೆರಪಿಸ್ಟ್ ಅಲ್ಲ, ರೇಪಿಸ್ಟ್ ಎನ್ನುವ ವಿಷಯ ಇದೀಗ ಬೆಳಕಿಗೆ ಬಂದಿದೆ. ಬಿಜೆಪಿ ವಕ್ತಾರ ಶೆಹ್‌ಜಾದ್ ಪೂನಾವಾಲ ಫೋಟೊ ಸಮೇತ ಟ್ವೀಟ್ ಮಾಡಿದ್ದು, ಈತ ರಿಂಕು, ಅತ್ಯಾಚಾರ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿದೆ. ಐಪಿಸಿ ಸೆಕ್ಷನ್ 376 ಹಾಗೂ ಪೋಕ್ಸೋ ಅಡಿ ಬಂಧಿತನಾಗಿರುವ ಆರೋಪಿಯಿಂದ ಮಸಾಜ್ ಮಾಡಿಸಿಕೊಳ್ಳಲಾಗುತ್ತಿದೆ. ರೇಪಿಸ್ಟ್‌ಗಳನ್ನು ಫಿಸಿಯೋಥೆರಪಿಸ್ಟ್ ಎಂದು ಹೇಳಿ ಕೇಜ್ರಿವಾಲ್ ಅವರು ಫಿಸಿಯೋಥೆರಪಿಸ್ಟ್‌ಗಳಿಗೆ ಅವಮಾನ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!