ʼಉದ್ದೇಶ ಪೂರ್ವಕವಾಗಿ ಮಾಡಿದ್ದಲ್ಲʼ: ವಿವಾದದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ತರೂರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ಬಿಡುಗಡೆಗೊಳಿಸಿದ ಚುನಾವಣಾ ಪ್ರಣಾಳಿಕೆಯನ್ನು ಸಂಸದ ಶಶಿತರೂರ್‌ ಬಿಡುಗಡೆಗೊಳಿಸಿದ್ದು ಅದರಲ್ಲಿ ವಿರೂಪಗೊಂಡ ಭಾರತದ ನಕಾಶೆಯಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ವಿವಾದ ಎದ್ದ ಬೆನ್ನಲ್ಲೇ ಈ ಕುರಿತು ತರೂರ್‌ ಸ್ಪಷ್ಟನೆ ನೀಡಿದ್ದು “ಯಾರೂ ಉದ್ದೇಶಪೂರ್ವಕವಾಗಿ ಇಂತಹ ಕೆಲಸಗಳನ್ನು ಮಾಡುವುದಿಲ್ಲ” ಎಂದಿದ್ದಾರೆ.

“ಸ್ವಯಂಸೇವಕರ ಸಣ್ಣ ತಂಡವು ತಪ್ಪು ಮಾಡಿದೆ. ನಾವು ಅದನ್ನು ತಕ್ಷಣವೇ ಸರಿಪಡಿಸಿದ್ದೇವೆ &ದೋಷಕ್ಕಾಗಿ ನಾನು ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ” ಎಂದು ತರೂರ್‌ ಹೇಳಿದ್ದು ಸರಿ ಪಡಿಸಿದ ಪ್ರಣಾಳಿಕೆಯನ್ನು ಹಂಚಿಕೊಂಡಿದ್ದಾರೆ.

ತರೂರ್ ಅವರ ಪ್ರಣಾಳಿಕೆಯಲ್ಲಿನ ಭಾರತೀಯ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳನ್ನು ಮತ್ತು ಲಡಾಖ್ ಅನ್ನು ಕೈ ಬಿಡಲಾಗಿದೆ. ಆದರೀಗ ಅದನ್ನು ಸರಿಪಡಿಸಲಾಗಿದೆ. ಶಶಿ ತರೂರ್‌ ಈ ರೀತಿ ಭಾರತೀಯ ಪ್ರದೇಶದ ತಪ್ಪಾದ ಪ್ರಾತಿನಿಧ್ಯವನ್ನು ಬಳಸಿದ್ದು ಇದೇ ಮೊದಲಲ್ಲ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!