ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯ ಇರೋವರೆಗೂ ಅವರ ಸ್ಥಾನ ಕಿತ್ತುಕೊಳ್ಳುವುದು ಕಷ್ಟ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ನಾವು ಹೇಳಿದ್ದು ಕೇವಲ ವ್ಯಕ್ತಿಯ ಚಿಂತನೆ ಅಲ್ಲ, ಸಮಗ್ರ ಭವಿಷ್ಯದ ಚಿಂತನೆ. ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದವರು ಹಕ್ಕಬುಕ್ಕರು. ಆ ಸಾಮ್ರಾಜ್ಯ ಕೊಡುಗೆ, ನೆನಪು, ಮೈಸೂರು ದಸರಾ ವಿಜಯನಗರ ಸಾಮ್ರಾಜ್ಯದ ಅರಸರುಗಳ ಕೊಡುಗೆ ಅಪಾರ. ಹಾಲುಮತ ಸಮಾಜದವರು ಅಧಿಕಾರಕ್ಕೆ ಬಂದರೆ ಸುಲಭವಾಗಿ ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.