Friday, June 2, 2023

Latest Posts

ಇದು ಶುಭವೋ…ಅಶುಭವೋ…ನೀವೇ ಚೆಕ್‌ ಮಾಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಲವರಿಗೆ ಕೆಲವೊಂದು ಸಂದರ್ಭಗಳಲ್ಲಿ ಕಣ್ಣುಗಳು ಅದುರುತ್ತಿರುತ್ತವೆ. ಇದು ಶುಭವೋ ಅಶುಭವೋ ಎಂಬ ಸಂದೇಹವೂ ಇರುತ್ತದೆ. ಒಂದೊಂದಕ್ಕೆ ಒಂದೊಂದು ಶಕುನ ಶಾಸ್ತ್ರ ಹೇಳುತ್ತಾರೆ. ಆದರೆ ವೈಜ್ಞಾನಿಕವಾಗಿ ಅವೆಲ್ಲವುಗಳಿಗೂ ಕಾರಣಗಳಿದ್ದೇ ಇರುತ್ತವೆ. ಹಾಗಾದ್ರೆ ಅವುಗಳೇನು ನೋಡೋಣ.

ಮಹಿಳೆಯರಿಗೆ ಬಲಗಣ್ಣು ಅದುರಬಾರದು, ಪುರುಷರಿಗೆ ಎಡಗಣ್ಣು ಅದುರವುದು ಅಪಶಕುನ ಎಂದು ಹೇಳುತ್ತಾರೆ. ಆದರೆ ಅಸಲಿಗೆ ಅದರ ಕಾರಣ ಬೇರೆಯಿದೆ. ತುಂಬಾ ಆಯಾಸವಾದಾಗ ಬಲಗಣ್ಣು ಅದುರಲಾರಂಭಿಸುತ್ತದೆ. ತಕ್ಷಣ ರೆಸ್ಟ್‌ ಮಾಡಿದರೆ ಅದು ವಾಸಿಯಾಗುತ್ತದೆ.

ಕಣ್ಣಿನಲ್ಲಿ ತೇವಾಂಶ ಕಡಿಮೆಯಿದ್ದರೂ ಅದುರುವ ಸಾಧ್ಯತೆಗಳಿವೆ. ಕಣ್ಣಿನ ತೇವಾಂಶ ವೃದ್ಧಿಯಾಗುವಂತಹ ಹಣ್ಣು, ತರಕಾರಿಗಳನ್ನು ಹೆಚ್ಚು ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಸರಿಯಾದ ಸಮಯಕ್ಕೆ ನಿದ್ದೆ ಮಾಡದಿದ್ದರೂ ಈ ಸಮಸ್ಯೆ ಕಂಡು ಬರುತ್ತದೆ. ನಿರಂತರ ಕಾಫಿ,ಟೀ, ಚಾಕಲೇಟ್‌ ಸೇವಿಸುತ್ತಿದ್ದರೆ ನಿಮಗೆ ಈ ಸಮಸ್ಯೆ ಗ್ಯಾರಂಟಿ. ಕೆಫೆನ್‌ ಅಂಶವಿರುವ ಪದಾರ್ಥಗಳನ್ನು ಮಿತಿಮೀರಿ ಸೇವಿಸುವುದು ಒಳ್ಳೆಯದಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!