ಮಹಿಳೆಯರಿಗೆ ಎಲ್ಲದಕ್ಕೂ ದೂರುಗಳಿವೆ, ಅವರು ಬೇಗ ಖುಷಿಯಾಗೋದಿಲ್ಲ ಅನ್ನೋದು ಕೆಲವು ಗಂಡಸರ ದೂರು. ಆದರೆ ಹೆಂಗಸರು ಬೇಗನೇ ಖುಷಿಯಾಗ್ತಾರೆ. ಹಾಗೆ ಬೇಗನೇ ಸಿಟ್ಟು ಕೂಡ ಮಾಡ್ತಾರೆ. ಕೆಲವೊಂದು ಟ್ರಿಕ್ಸ್ ಗೊತ್ತಿದ್ರೆ ಸಾಕು ನಿಮ್ಮ ಶ್ರೀಮತಿಯನ್ನು ಖುಷಿಯಾಗಿ ಇಡಬಹುದು. ದಿನವೂ ಅವರ ನಗುಮುಖ ನೋಡಬಹುದು..
- ಜಾಸ್ತಿ ಏನೂ ಬೇಡ ಚೆನ್ನಾಗಿ ಟ್ರೀಟ್ ಮಾಡಿ ಸಾಕು, ಬೇರೆಯವರು ಇರಲಿ ಅಥವಾ ನೀವಿಬ್ಬರೇ ಇರಲಿ ಅವಳಿಗೆ ಗೌರವ ಕೊಟ್ಟು ಮಾತನಾಡಿಸಿ.
ಉದಾಹರಣೆ: ಈಗಿನ್ನ ಪಾತ್ರೆ ತೊಳ್ದು ಬಂದಿದಿಯಾ, ಸುಸ್ತಾಗಿರತ್ತೆ ಕೂರು ಕಾಫಿ ಮಾಡ್ತೀನಿ! - ನೀವು ಲೈಫ್ನಲ್ಲಿ ನೂರಾರು ಕಂಡೀಷನ್ಸ್ಗಳ ಜೊತೆ ಬದುಕಿರಬಹುದು. ಆದರೆ ಅವಳಿಗಾಗಿ ಅವನ್ನು ಪಕ್ಕಕ್ಕಿಡಿ.
ಉದಾಹರಣೆ: ‘ಪ್ರತೀ ಸಲ ನನ್ನಿಷ್ಟದ ಜಾಗಕ್ಕೆ ಹೋಗ್ತೀವಿ, ಈ ಸಲ ನೀ ಹೇಳು ಎಲ್ಲಿಗ್ ಹೋಗೋಣ?’ - ಯಾವಾಗ್ಲೂ ನೀವೇ ಮಾತಾಡ್ಬೇಕು ಅಂತಿಲ್ಲ, ಕೆಲವೊಮ್ಮೆ ಬರೀ ಕೇಳಿಸ್ಕೊಳ್ಳಿ ಸಾಕು. ನಿಮಗೆ ಅದು ಬಕ್ವಾಸ್ ಆಗಿರಬಹುದು, ಆದರೆ ಅದು ಅವಳಿಗೆ ಅದೇನೋ ಮುಖ್ಯ.
ಉದಾಹರಣೆ: ‘ನಿಮ್ಮಕ್ಕ ಯಾಕ್ ಹಾಗಂದ್ರು? ಮನಸ್ಸಿನಲ್ಲಿ ಇರೋದೆಲ್ಲಾ ಹೇಳ್ಕೋ..’ - ಜವಾಬ್ದಾರಿ ತಗೊಳಿ, ಕೆಲವೊಮ್ಮೆ ಮಿಸ್ ಆಗಿಯೇ ಬಾಯಿಂದ ಕೆಲ ಮಾತುಗಳು ಬಂದುಬಿಡುತ್ತದೆ. ಆದರೆ ಅದನ್ನು ಇಗ್ನೋರ್ ಮಾಡಿ ಎಲ್ಲವೂ ನಾರ್ಮಲ್ ಎನ್ನುವಂತೆ ಬಿಹೇವ್ ಮಾಡ್ಬೇಡಿ. ಹೇಳಿದ್ದನ್ನು ಒಪ್ಪಿಕೊಂಡು ಕ್ಷಮೆ ಕೇಳಿ
ಉದಾಹರಣೆ: ‘ನಿನ್ ಫ್ರೆಂಡ್ ಇವತ್ ಸಖತ್ ಆಗ್ ಕಾಣ್ತಿದಾಳೆ, ಪರಿಚಯ ಮಾಡ್ಸೆ’ - ಆಕೆಯನ್ನು ಎಂದಿಗೂ ಗ್ರಾಂಟೆಡ್ ಆಗಿ ತಗೋಬೇಡಿ. ಹೆಂಡತಿ ಅಲ್ವಾ? ಎಲ್ಲಿಗೆ ಹೋಗ್ತಾಳೆ? ಅನ್ನೋ ಆಟಿಟ್ಯೂಡ್ ಬದಲಾಗಲಿ.
ಉದಾಹರಣೆಗೆ: ‘ನಿನ್ ಜೊತೆ ಸಿಕ್ಕಾಕೊಂಡಿದಿನಿ ನನ್ ಕರ್ಮ’ - ನೀವು ಮಗು ಅಲ್ಲ, ಮನೆಗೆ ದುಡಿದು ತಂದು ಹಾಕಿದ್ರೆ ಸಾಕಾಗಲ್ಲ, ಆಕೆಗೆ ಸಹಾಯ ಮಾಡಿ, ಅವಳಿಗೆ ಭಾರ ಆಗ್ಬೇಡಿ. ಅಪರೂಪಕ್ಕಾದರೂ ಹೆಲ್ಪ್ ಮಾಡಿ.
ಉದಾಹರಣೆ: ಏನೂ ಮಾತಾಡದೇ ಇಂದು ನೀವೇ ಕಸ ಗುಡಿಸಿ, ಪೂಜೆಯನ್ನೂ ಮಾಡಿ. - ಲಾಯಲ್ ಆಗಿರಿ. ತಪ್ಪು ಮಾಡಿರಲಿ ಅದನ್ನು ಹೇಳಿ ತಿದ್ದಿ ನಡೀರಿ. ಇಬ್ಬರೂ ಜೊತೆಗಿದ್ರೆ ಮಾತ್ರ ನಿಮ್ಮ ಜೀವನದ ಬಂಡಿ ಮುಂದೆ ಹೋಗೋಕೆ ಸಾಧ್ಯ.
ಉದಾಹರಣೆ: ‘ಫ್ಲಶ್ ಸರಿಯಾಗಿ ಮಾಡಿಲ್ಲ ನೀನು ಅಂತ ಬೈದೆ, ಆದರೆ ಸರಿಯಾಗಿ ಫ್ಲಶ್ ಮಾಡದೇ ಬಿಟ್ಟು ಬಂದಿದ್ದು ನಾನು ಸಾರಿ’. - ಹೇಳೋದನ್ನು ಗಮನ ಇಟ್ಟು ಕೇಳಿ. ಹೆಂಗಸರು ಎಷ್ಟೊಂದು ಮಾತಾಡ್ತಾರೆ, ಎಲ್ಲಾನೂ ಕೇಳಕ್ಕಾಗಲ್ಲ ಅನ್ನೋದು ನಿಮ್ಮ ವಾದ ಆಗಿರ್ಬೋದು. ಆದರೆ ಗಮನ ಹೋಗೋದು ಬೇಡ.
ಉದಾಹರಣೆ: ಅವಳು ಮಾತಾಡ್ತಾ ಫೋನ್ ನೋಡ್ಕೊಂಡು ಎಲ್ಲಕ್ಕೂ ಹೂಂಗುಟ್ಟಬೇಡಿ. - ಸಾಥ್ ನೀಡಿ, ಅಷ್ಟೆ ಅದು ಒಳ್ಳೆಯದೋ ಕೆಟ್ಟದೋ ಗೊತ್ತಿಲ್ಲ. ನೀವು ಬೇಡ ಅಂದರೂ ಅವಳೇನೋ ನಿರ್ಧಾರ ಮಾಡಿರಬಹುದು. ಅದು ತಪ್ಪಾಗಿಯೂ ಇರಬಹುದು. ಹಾಗಂತ ಸುಮ್ನೆ ಇರೋಕಾಗತ್ತಾ? ಅವಳ ಕೈ ಬಿಡಬೇಡಿ.
ಉದಾಹರಣೆ: ನೀನೇ ಮಾಡ್ಕೊಂಡಿದ್ದು ಅನುಭವಿಸು ಅನ್ಬೇಡಿ, ಈಗೇನ್ ಮಾಡೋಣ ಅಂತ ಧೈರ್ಯ ಕೊಡಿ.