ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮೋದೀಜಿ, ದೇಶಕ್ಕೆ ‘ಮನ್ ಕೀ ಬಾತ್’ ಗಿಂತ ‘ಜನ್ ಕೀ ಬಾತ್’ ನ ಅಗತ್ಯವಿದೆ: ರಾಹುಲ್ ಟ್ವೀಟ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತದಲ್ಲಿ ಕೊರೋನಾ ಸೋಂಕಿನ ಆರ್ಭಟ ಹೆಚ್ಚಾಗುತ್ತಿದೆ,‌ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್ ಬದಲು ಜನ್ ಕಿ ಬಾತ್ ಮಾಡುವುದು ಸೂಕ್ತ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದೇಶದಲ್ಲಿ ವ್ಯವಸ್ಥೆ ವಿಫಲವಾಗಿದೆ. ಮನ್ ಕೀ ಬಾತ್ ಗಿಂತಲೂ ಜನ್ ಕಿ ಬಾತ್ ಈಗ ಸೂಕ್ತ ಎಂದಿದ್ದಾರೆ.
ದೇಶದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಜವಾಬ್ದಾರಿಯುತ ನಾಗರಿಕರ ಅಗತ್ಯವಿದೆ. ಕಾಂಗ್ರೆಸ್ ಸಹೋದ್ಯೋಗಿಗಳು ಎಲ್ಲಾ ರಾಜಕೀಯ ಕೆಲಸಗಳನ್ನು ಬಿಟ್ಟು, ಜನರಿಗೆ ಸಹಾಯ ಮಾಡಿ. ನಮ್ಮ ದೇಶದ ಜನರ ನೋವನ್ನು ಕಡಿಮೆ ಮಾಡಿ. ಇದು ಕಾಂಗ್ರೆಸ್ ಕುಟುಂಬದ ಧರ್ಮ ಎಂದೂ ಅವರು ಕರೆ ನೀಡಿದ್ದಾರೆ.
ಕೋವಿಡ್ ಕುರಿತಾದ ಕೇಂದ್ರ ಸರ್ಕಾರದ ನಿಲುವುಗಳನ್ನು ವಿರೋಧಿಸುತ್ತಲೇ ಬಂದಿರುವ ರಾಹುಲ್ ಗಾಂಧಿ, ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜೆನ್ ಕೊರತೆಗೂ ಕೇಂದ್ರ ಸರ್ಕಾರ ಕಾರಣ ಎಂದು ಟ್ವೀಟ್ ಮಾಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss