APRIL FOOL | ಇವತ್ ಸ್ಕೂಲ್ ರಜೆ ಅಂತೆ… ಏಪ್ರಿಲ್ ಫೂಲ್, ಏಪ್ರಿಲ್ ಫೂಲ್.. ಬಾಲ್ಯದ ಈ ದಿನ ನೆನಪಿದ್ಯಾ?

ಫ್ರೆಂಡ್‌ಗೆ ಫೋನ್ ಮಾಡಿ ಇವತ್ ಸ್ಕೂಲ್ ರಜೆ ಅಂತೆ… ಹೌದೇನೆ ಯಾಕೆ? ಎಂದು ಕೇಳಿದ್ದಕ್ಕೆ ಬಕ್ರಾ ಆದೆ ಅಲಾ.. ಏಪ್ರಿಲ್ ಫೂಲ್, ಏಪ್ರಿಲ್ ಫೂಲ್ ಎಂದು ಕುಣಿದು ಕುಪ್ಪಳಿಸಿದ್ದು, ಪಕ್ಕದ ಮನೆಯ ಅಂಕಲ್‌ಗೆ ನಿಮ್ಮ ಕೆನ್ನೆ ಮೇಲೆ ಹುಳ ಕೂತಿದೆ ಎಂದು ಗಾಬರಿಯಿಂದ ಹೇಳಿದಾಗ ಅವರು ಪಟ್ ಎಂದು ಕೆನ್ನೆ ಮುಟ್ಟಿಕೊಂಡಿದ್ದು?
ಕೈ ನೋವು, ಅಮ್ಮಾ ಸಿಕ್ಕಾಪಟ್ಟೆ ಎಂದು ಕೂಗಾಡಿದಾಗ ಅಮ್ಮ ಬಂದು ಗಾಬರಿಯಿಂದ ಏನಾಯ್ತು ಎಂದು ಮೈ ಕೈ ಮುಟ್ಟಿದ ಮೇಲೆ ಏಪ್ರಿಲ್ ಫೂಲ್ ಎಂದು ನಕ್ಕಿದ್ದು…
ಈಗೆಲ್ಲಾ ಇವು ನೆನಪು ಮಾತ್ರ..

ಸ್ವಲ್ಪ ದೊಡ್ಡವರಾಗ್ತಿದ್ದಂತೆಯೇ ಪ್ರಪೋಸ್ ಮಾಡೋದಕ್ಕೆ ಏಪ್ರಿಲ್ 1ನ್ನು ಸೀಮಿತಿವಾಗಿ ಇಟ್ಟವರೂ ಇದ್ದಾರೆ. ಗುಡ್ ನ್ಯೂಸ್ ಆದ್ರೆ ಖುಷಿ, ಆದರೆ ಹುಡುಗಿ ಒಪ್ಪಿಲ್ಲವಾದರೆ ನಾನು ತಮಾಷೆ ಮಾಡಿದೆ ಏಪ್ರಿಲ್ ಫೂಲ್ ಎಂದುಬಿಡೋದು.. ಹೀಗೆ ಆದರೆ ಈಗೆಲ್ಲಾ ಈ ರೀತಿ ತಮಾಷೆಗಳು ನಡೆಯೋದೇ ಇಲ್ಲ.

ಮಕ್ಕಳು ಸಣ್ಣ ವಯಸ್ಸಿನಲ್ಲೇ ದೊಡ್ಡವರಾಗಿಬಿಟ್ಟಿದ್ದಾರೆ, ನಿಮ್ಮ ಜೋಕ್‌ಗಳಿಗೆ ನಗು ಬರೋದಿಲ್ಲ ಎಂದು ನೇರವಾಗಿ ಹೇಳುವಷ್ಟು!

ಪ್ರತಿವರ್ಷ ಈ ದಿನವನ್ನು ಮೂರ್ಖರ ದಿನವನ್ನಾಗಿ ಆಚರಣೆ ಮಾಡ್ತಾರೆ, ಯಾರನ್ನಾದರೂ ನಗಿಸೋಕೆ, ತಾವು ನಗೋದಕ್ಕೆ ಇಂದು ಅವಕಾಶ ಅಷ್ಟೆ. ಇಂದೇ ಯಾಕೆ ಮೂರ್ಖರ ದಿನ ಆಚರಣೆ ಮಾಡ್ತಾರೆ ಅನ್ನೋದಕ್ಕೆ ಯಾವುದೇ ಸ್ಪಷ್ಟ ಇತಿಹಾಸ ಇಲ್ಲ.

ಗ್ರೆಗೋರಿಯನ್ ಕ್ಯಾಲೆಂಡರ್ ಜಾರಿಗೆ ಬಂದಾಗಿನಿಂದ ಜನವರಿ 1ನ್ನು ಹೊಸ ವರ್ಷ ಎಂದು ಆಚರಿಸಲಾಯ್ತು. ಆದರೆ ಇದರ ಹಿಂದೆ ಇದ್ದ ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಮಾರ್ಚ್ ವರ್ಷಾಂತ್ಯ ಎಂದು ಹೇಳಲಾಗಿತ್ತು. ಕೆಲವರು ಹೊಸ ಕ್ಯಾಲೆಂಡರ್ ಒಪ್ಪೋದಕ್ಕೆ ತಯಾರಿರಲಿಲ್ಲ. ಅವರನ್ನು ಮೂರ್ಖರು ಎಂದು ನಿಂದಿಸಲಾಗಿತ್ತು. ಪ್ರಾಯಶಃ ಅವರನ್ನು ತಮಾಷೆ ಮಾಡುವ ಸಲುವಾಗಿ ಏಪ್ರಿಲ್ 1ನ್ನು ಮೂರ್ಖರ ದಿನ ಎಂದು ಕರೆದಿರಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!