Tuesday, July 5, 2022

Latest Posts

ಇಲ್ಲಿದೆ ಮಹಿಳೆಯರೇ ನಡೆಸುವ ವಿಶ್ವದ ಅತೀ ದೊಡ್ಡ ಮಾರ್ಕೆಟ್, ಇಲ್ಲಿ ಗಂಡಸರಿಗೆ ಎಂಟ್ರಿ ಇಲ್ಲ!

ಮೇಘನಾ ಶೆಟ್ಟಿ, ಶಿವಮೊಗ್ಗ

ಸಾಮಾನ್ಯವಾಗಿ ಮಾರ್ಕೆಟ್‌ನಲ್ಲಿ ಏನಿರುತ್ತದೆ? ಹೆಚ್ಚಾಗಿ ಗಂಡಸರು ವ್ಯಾಪಾರ ಮಾಡ್ತಿರ‍್ತಾರೆ, ಹೆಂಗಸರು ಚೌಕಾಸಿ ಮಾಡ್ತಿರ‍್ತಾರೆ.
ಆದರೆ ಮಣಿಪುರದಲ್ಲಿ ಒಂದು ಮಾರ್ಕೆಟ್ ಇದೆ, ಇಲ್ಲಿ ಸೀನ್ ಉಲ್ಟಾ. ಈ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡೋದು ಹೆಣ್ಣುಮಕ್ಕಳು ಮಾತ್ರ. ಗಂಡಸರಿಗೆ ಇಲ್ಲಿ ಎಂಟ್ರಿನೇ ಇಲ್ಲ.

ಇಂಪಾಲ್‌ನಲ್ಲಿರುವ ‘ಮದರ‍್ಸ್ ಮಾರ್ಕೆಟ್‌’ನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಹಿಳೆಯರು ತಮ್ಮ ಅಂಗಡಿಗಳನ್ನು ತೆಗೆದು ವ್ಯಾಪಾರ ಮಾಡ್ತಿದ್ದಾರೆ. ಈ ಪ್ರದೇಶದಲ್ಲಿ ಗಂಡಸರು ಯಾವುದೇ ಶಾಪ್ ಇಡುವಂತಿಲ್ಲ. ಏಷ್ಯಾದಲ್ಲಿ ಹೆಣ್ಣುಮಕ್ಕಳೇ ನಡೆಸುವ ಅತೀ ದೊಡ್ಡ ಮಾರ್ಕೆಟ್ ಇದಾಗಿದೆ.

The Charm of Mother's Market in Manipur - Media India Groupತಲೆಮಾರುಗಳಿಂದ ಕೆಲಸ
ಈ ಮಾರುಕಟ್ಟೆ ಇದೀಗ ಉದ್ಭವ ಆಗಿರೋದಲ್ಲ. ಇಲ್ಲಿ ತಲೆಮಾರುಗಳಿಂದ ವ್ಯಾಪಾರ ವಹಿವಾಟು ನಡೆಯುತ್ತಲೇ ಇದೆ. ನನ್ನ ಅಜ್ಜಿ ಇಲ್ಲಿ ಅಂಗಡಿ ಹಾಕಿದ್ರು. ಅದಾದಮೇಲೆ ಅಮ್ಮ, ಈಗ ನಾನು ಅಂತಾರೆ ಇಲ್ಲಿನ ವ್ಯಾಪಾರಿ ಮಹಿಳೆ.

The Charm of Mother's Market in Manipur - Media India Groupಹೇಗೆ ಶುರುವಾಯ್ತು?
500 ವರ್ಷಗಳ ಹಿಂದೆ ಈ ಮಾರುಕಟ್ಟೆ ಆರಂಭವಾಯ್ತು. ಮೈಟಿ ಸಮುದಾಯದ ಗಂಡಸರು, ಯುದ್ಧ, ಕೆಲಸ ಎಂದು ಹೊರಗೆ ಇದ್ದಾಗ, ಮನೆಯ ಹೆಂಗಸರು, ಜೀವನ ನಡೆಸಲು ಅಂಗಡಿಗಳನ್ನು ಹಾಕೋದಕ್ಕೆ ಶುರು ಮಾಡಿದ್ರು. ಕಾಲ ಬದಲಾಗುತ್ತಿದ್ದಂತೆ, ಮಹಿಳೆಯರ ಕೌಶಲ ಕೂಡ ಹೆಚ್ಚಾಯ್ತು.

Mother's market | Deccan Heraldಸಮಾಜದ ಆರ್ಥಿಕತೆಗೆ ಲಾಭ
ಮದುವೆಯ ನಂತರ ಹೆಚ್ಚಿನ ಮಹಿಳೆಯರು ಇಲ್ಲಿ ಅಂಗಡಿಗಳನ್ನು ತೆರೆದಿದ್ದಾರೆ. ಮನೆಗೆ ಹಣ ತರುವುದು ಕೇವಲ ಗಂಡಸರ ಕೆಲಸ ಅಲ್ಲ, ಅವರಷ್ಟಾಗದಿದ್ದರೂ ಅವರ ಸಹಾಯಕ್ಕೆ ಕೈ ಜೋಡಿಸಬೇಕು ಎನ್ನುವುದು ಮಹಿಳೆಯರ ಅಭಿಪ್ರಾಯ. ಜೊತೆಗೆ ಸಮಾಜದ ಆರ್ಥಿಕತೆಗೂ ಸಹಕಾರ ಆಗುವ ರೀತಿ ಇಲ್ಲಿ ಬ್ಯುಸಿನೆಸ್ ನಡೆಯುತ್ತದೆ. ಈ ಮಾರುಕಟ್ಟೆಯಿಂದ ವರ್ಷಕ್ಕೆ 50 ಕೋಟಿಗೂ ಹೆಚ್ಚಿನ ವಹಿವಾಟು ನಡೆಯುತ್ತದೆ.

Exploring Ima Keithal, a 500-Year-Old All Women Market in Manipurಮಾರ್ಕೆಟ್‌ನಲ್ಲಿ ಏನೇನಿದೆ?
ಎಲ್ಲ ಮಾರ್ಕೆಟ್‌ಗಳಲ್ಲಿ ಸಿಗುವ ವಸ್ತುಗಳು ಇಲ್ಲಿಯೂ ಸಿಗುತ್ತದೆ. ತರಕಾರಿ, ಹಣ್ಣು, ಪಾತ್ರೆಗಳು, ಚಾಕು-ಕತ್ತರಿ. ಮೀನು, ಕಲಾ ಕುಸುರಿ ಸಾಮಾಗ್ರಿ. ಸಾಂಪ್ರಾದಾಯಕ ಉಡುಪುಗಳು.

mother's market - Reviews, Photos - Ima Keithel Women's Market - Tripadvisorಏನ್ ಮಾತಾಡ್ತಾರೆ?
ಮಹಿಳೆಯರು ಎಲ್ಲಿ ಸೇರಿದ್ರೂ ಗಾಸಿಪ್ ಮಾಡ್ತಾರೆ ಅನ್ನೋರಿಗೆ ಈ ಮಹಿಳೆಯರು ಖಡತ್ ಉತ್ತರ ನೀಡ್ತಾರೆ. ಊರಿನ ಸಣ್ಣ ಸಮಸ್ಯೆಯಿಂದ ಹಿಡಿದು, ಅಂತಾರಾಷ್ಟ್ರೀಯ ಸಮಸ್ಯೆಗಳ ಬಗ್ಗೆಯೂ ಇಲ್ಲಿ ಮಾತನಾಡ್ತಾರೆ. ಎಷ್ಟೋ ಮಂದಿಗೆ ಶಿಕ್ಷಣ ಇರೋದಿಲ್ಲ. ಈ ಮಾರುಕಟ್ಟೆಯಲ್ಲಿ ಮಾತನಾಡಿ, ಎಷ್ಟೋ ವಿಷಯಗಳನ್ನು ತಿಳಿದುಕೊಂಡು ವಿದ್ಯಾವಂತರಾಗಿದ್ದೀವಿ ಎಂದು ಮಹಿಳೆಯರು ಹೇಳುತ್ತಾರೆ.

Women Protected This Market from the British! (Ema Market Shopping Tour) -  YouTubeಹಿಂದೊಮ್ಮೆ ಮಣಿಪುರದಲ್ಲಿ ಭೂಕಂಪ ಆದಾಗ ಈ ಮಹಿಳೆಯರು ಮಾರುಕಟ್ಟೆಯನ್ನೇ ಕಳೆದುಕೊಂಡು ಬೀದಿಗೆ ಬಿದ್ದಿದ್ದರು. ಆದರೆ ಛಲ ಬಿಡದ ಮಹಿಳೆಯರು ಬ್ಯುಸಿನೆಸ್ ಮಾಡೋದನ್ನು ನಿಲ್ಲಿಸಲಿಲ್ಲ. ರಸ್ತೆ ಬದಿಯಲ್ಲೇ ವ್ಯಾಪಾರ ಮಾಡಿದ್ರು. ಭಾರತೀಯ ಮಹಿಳೆ ಮನಸ್ಸು ಮಾಡಿದ್ರೆ ಏನನ್ನಾದರೂ ಸಾಧಿಸುತ್ತಾಳೆ ಅನ್ನೋದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಾ?

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss