ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನೆನಪಾಗಿದೆ ‘ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ…’ ಗಡಿನಾಡಲ್ಲಿ ಕನ್ನಡದ ಊರುಗಳಿಗೆ ‘ರಂ… ಮ್’!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಮಂಗಳೂರು:

`ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ…ಎಲ್ಲೆಲ್ಲು ಎದ್ದೆದ್ದು ಓಡಿ ಬನ್ನಿ…ಕನ್ನಡದ ಗಡಿಕಾಯೆ, ಗುಡಿ ಕಾಯೆ, ನುಡಿ ಕಾಯೆ ಕಾಯಲಾರೆವೆ ಸಾವೆ, ಓ ಬನ್ನಿ ಬನ್ನಿ…’
ಹೀಗೆಂದು ಅಂದು ಕನ್ನಡ ಬಾಂಧವರಿಗೆ ಕರೆ ಕೊಟ್ಟ ಎಂಬ ಗಡಿನಾಡ ಕವಿ, ಕರ್ನಾಟಕ ಏಕೀಕರಣ ಚಳುವಳಿಯ ಮುಂಚೂಣಿಯ ನಾಯಕ ನಾಡೋಜ ಕಯ್ಯಾರ ಕಿಂಞಣ್ಣ ರೈ ಅವರ ಭಾವಪೂರ್ಣ ಹಾಡು ಕನ್ನಡ ಭಾಷಾಭಿಮಾನಿಗಳಿಗೆ ಮತ್ತೆ ನೆನಪಾಗುತ್ತಿದೆ. ಕೇರಳ-ಕರ್ನಾಟಕ ಗಡಿನಾಡುಗಳಲ್ಲಿ ಕನ್ನಡಕ್ಕೆ ಮತ್ತೆ ಬೆಂಕಿ ಬಿದ್ದಿದೆ! ಕನ್ನಡಿಗರ ಹೃದಯ ಭಾವನೆಗಳಿಗೆ ಘಾಸಿಯಾಗಿದೆ…
ಅಂದು ಕಯ್ಯಾರರ ಸತತ ಹೋರಾಟದ ಫಲವಾಗಿಯೂ ಕನ್ನಡದ ಕಾಸರಗೋಡು ಕನ್ನಡಿಗರಿಗೆ ದಕ್ಕಲೆ ಇಲ್ಲ. ಈಗ ಕನ್ನಡದ ಊರುಗಳ ಸರದಿ.
ಕೇರಳ ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಕನ್ನಡಿಗರ ಭಾವನೆಯನ್ನು ಘಾಸಿಗೊಳಿಸುವ ಕೆಲಸವನ್ನು ಮತ್ತೊಮ್ಮೆ ಮಾಡಿದ್ದು, ಕನ್ನಡದ ಊರುಗಳಿಗೆ ಬೆಂಕಿ ಬಿದ್ದಿದೆ! ಗಡಿನಾಡಿನಲ್ಲಿ ಕನ್ನಡಕ್ಕೆ ಕೊಳ್ಳಿ ಇಕ್ಕುವ ಕಾರ್ಯ ನಡೆದಿರುವುದು ಕರುನಾಡಿನ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಕೇರಳದಲ್ಲಿರುವ ಕನ್ನಡದ ಹೆಸರುಗಳನ್ನು ಅಧಿಕೃತವಾಗಿ ಮಲಯಾಳಂ ಭಾಷೆಗೆ ಬದಲಾಯಿಸಿಕೊಳ್ಳಲು ಅಧಿಸೂಚನೆ ಹೊರಬಿದ್ದಿದೆ. ಇದು ಸಹಜವಾಗಿಯೇ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸಾಂಸ್ಕೃತಿಕ ಹಿನ್ನೆಲೆಯುಳ್ಳ, ಹೆಸರಿನೊಂದಿಗೆ ಆ ಊರಿನ ಮಹತ್ವ ಸಾರಿದ ಕನ್ನಡದ ಹೆಸರುಗಳು ಇನ್ನು ಅಚ್ಚಳಿಯದ ನೆನಪುಗಳಾಗಿಯಷ್ಟೆ ಉಳಿಯಲಿವೆ.

ಯಾವ ಊರು ಏನಾಯಿತು?

ಕೇರಳ ಸರಕಾರ ಹೊರಡಿಸಿರುವ ಅಧಿಸೂಚನೆಯಂತೆ ಕೇರಳದ ೧೧ ಕನ್ನಡ ಊರುಗಳು ತಮ್ಮ ನೆಲೆ ಕಳೆದುಕೊಂಡಿವೆ. ಮಧೂರು ಇನ್ನು ಮಧುರಮ್ ಎಂದು ಗುರುತಿಸಿಕೊಳ್ಳಲಿದೆ. ಕಾರಡ್ಕ-ಕಡಗಮ್ ಆಗಲಿದೆ. ಪಿಲಿಕುಂಜೆ-ಪಿಲಿಕುನ್ನಿ, ಮಂಜೇಶ್ವರ-ಮಂಜೇಶ್ವರಂ, ಕುಂಬಳೆ-ಕುಂಬ್ಳಾ, ನೆಲ್ಲಿಕುಂಜ-ನೆಲ್ಲಿಕುನ್ನಿ, ಮಲ್ಲ-ಮಲ್ಲಮ್, ಬೇದಡ್ಕ-ಬೆಡಗಮ್, ಆನೆ ಬಾಗಿಲು-ಆನೆವಾಗಿಲ್, ಹೊಸದುರ್ಗ-ಪುದಿಯಕೋಟ, ಸಸಿಹಿತ್ಲು-ಶೈಲವಮ್ ಆಗಲಿದೆ. ಕನ್ನಡದ ಹೆಸರಿನೊಂದಿಗೆ ಆ ಊರಿನ ಹಿನ್ನೆಲೆ ಸಾರುತ್ತಿದ್ದ ಈ ಊರುಗಳು ಅನಿವಾರ್ಯವಾಗಿ ಮಲಯಾಳಂ ಭಾಷೆಗೆ ಒಗ್ಗಿಕೊಳ್ಳುವಂತಾಗಿದೆ. ಕನ್ನಡ ಭಾಷೆಯಲ್ಲಿರುವ ಊರಿನ ಬೋರ್ಡುಗಳೂ ತರ್ಜುಮೆಗೊಳ್ಳಲಿರುವುದು ವಿಪರ್‍ಯಾಸವೇ ಸರಿ.

ಭಾಷಾಭಿಮಾನಿಗಳ ಆಕ್ರೋಶ

ಮಂಜೇಶ್ವರ ಮತ್ತು ಕಾಸರಗೋಡು ಕೇರಳದಲ್ಲಿದ್ದರೂ ಕರ್ನಾಟಕದೊಂದಿಗೇ ಹೆಚ್ಚು ನಂಟು ಹೊಂದಿರುವ ಪ್ರದೇಶಗಳು. ಇಲ್ಲಿ ಹೆಚ್ಚಿನ ಮಂದಿ ಕನ್ನಡ ಭಾಷೆಯನ್ನೇ ಮಾತನಾಡುವವರು. ಕನ್ನಡ ಭಾಷಾಭಿಮಾನಿಗಳು ಕೂಡ. ಆದರೆ ಕನ್ನಡ ಭಾಷೆಯನ್ನು ಹೆಚ್ಚು ಬಳಸುವಂತಹ ಕನ್ನಡಿಗರಿರುವ ಹಾಗೂ ಅಪಾರ ಭಾಷಾ ಅಭಿಮಾನಿಗಳುಳ್ಳ ಈ ಭಾಗದಲ್ಲಿ ಕನ್ನಡ ಸಾಂಸ್ಕೃತಿಕ ಪರಂಪರೆಯನ್ನು ಸೂಚಿಸುವ ಹೆಸರುಗಳನ್ನು ಹೊಂದಿದ್ದ ಹಳ್ಳಿಗಳ ಹೆಸರುಗಳನ್ನು ಬದಲಾಯಿಸಿರುವುದು ಭಾಷಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss