ನಟಿ ರಾಖಿ ಮದುವೆಯಾಗಿದ್ದು ನಿಜ: ಕೊನೆಗೂ ಒಪ್ಪಿಕೊಂಡ ಆದಿಲ್​ ಖಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ನಟಿ ರಾಖಿ ಸಾವಂತ್​ (Rakhi Sawant) ಅವರು ರಿತೇಶ್​ ಎಂಬುವವರ ಜೊತೆ ಮದುವೆ ಆಗಿದ್ದರು. ಆದರೆ ಮೊದಲನೇ ಪತ್ನಿಗೆ ರಿತೇಶ್​ ವಿಚ್ಛೇದನ ನೀಡಿಲ್ಲದ ಕಾರಣ ರಾಖಿ ಜೊತೆಗಿನ ಅವರ ವಿವಾಹ (Rakhi Sawant Wedding) ಮಾನ್ಯವಾಗಲಿಲ್ಲ.

ಕಳೆದ ವರ್ಷ ಆದಿಲ್​ ಖಾನ್​ ಜೊತೆ ರಾಖಿ ಸಾವಂತ್​ ಅವರು ಸೀಕ್ರೆಟ್​ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದ್ರೆ ಇತ್ತೀಚೆಗೆ ಆ ವಿಚಾರ ಬಯಲಾಗಿತ್ತು. ಆದರೆ ಮದುವೆ ಆಗಿದ್ದನ್ನು ಒಪ್ಪಿಕೊಳ್ಳಲು ಆದಿಲ್​ ಖಾನ್​ (Adil Khan) ಹಿಂದೇಟು ಹಾಕಿದ್ದರು.

ಆದ್ರೆ ಇದೀಗ ಆದಿಲ್​ ಖಾನ್​ ಅವರು ರಾಖಿ ಜೊತೆಗೆ ಮದುವೆ ಆಗಿರುವುದಾಗಿ ಈಗ ಒಪ್ಪಿಕೊಂಡಿದ್ದಾರೆ. ಆ ಕುರಿತು ಅವರು ಮಾಡಿರುವ ಸೋಶಿಯಲ್​ ಮೀಡಿಯಾ ಪೋಸ್ಟ್​ ವೈರಲ್​ ಆಗಿದೆ.

‘ಕೊನೆಗೂ ಇಲ್ಲೊಂದು ಅನೌನ್ಸ್​ಮೆಂಟ್​ ಇದೆ. ರಾಖಿಯನ್ನು ಮದುವೆ ಆಗಿಲ್ಲ ಅಂತ ನಾನು ಎಂದಿಗೂ ಹೇಳಿಲ್ಲ. ಕೆಲವು ವಿಷಯಗಳನ್ನು ನಿಭಾಯಿಸಬೇಕಿತ್ತು. ಹಾಗಾಗಿ ಮೌನವಾಗಿದ್ದೆ. ಮದುವೆಯ ಶುಭಾಶಯಗಳು ರಾಖಿ’ ಎಂದು ಆದಿಲ್​ ಖಾನ್​ ಪೋಸ್ಟ್​ ಮಾಡಿದ್ದಾರೆ. ಅದಕ್ಕೆ ಕಮೆಂಟ್​ ಮಾಡಿರುವ ರಾಖಿ ಸಾವಂತ್​ ಅವರು, ‘ಧನ್ಯವಾದಗಳು ಜಾನ್​.. ಲಾಟ್ಸ್​ ಆಫ್​ ಲವ್​’ ಎಂದು ಬರೆದುಕೊಂಡಿದ್ದಾರೆ.

ರಾಖಿ ಸಾವಂತ್​ ಅವರ ಮದುವೆಯ ಫೋಟೋಗಳು ವೈರಲ್​ ಆಗಿದ್ದರೂ ಕೂಡ ಆದಿಲ್​ ಮೌನವಾಗಿದ್ದರು. ಇದು ರಾಖಿಯ ಆತಂಕಕ್ಕೆ ಕಾರಣ ಆಗಿತ್ತು. ಆದರೆ ಈಗ ಅವರು ನಿಟ್ಟುಸಿರು ಬಿಟ್ಟಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!