ಜ. 9 ರಂದು ಮಿಜೋರಾಂ ರಾಜ್ಯಪಾಲರಾಗಿ ವಿಕೆ ಸಿಂಗ್ ಪ್ರಮಾಣ ವಚನ ಸ್ವೀಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಿಜೋರಾಂನ ನೂತನ ಗವರ್ನರ್ ಆಗಿ ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿಜಯ್ ಕುಮಾರ್ ಸಿಂಗ್ ಅವರು ಜನವರಿ 9 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಮಾರಂಭದಲ್ಲಿ ಮುಖ್ಯಮಂತ್ರಿ ಲಾಲ್ದುಹೋಮ, ಅವರ ಸಂಪುಟ ಸಹೋದ್ಯೋಗಿಗಳು, ವಿಧಾನಸಭಾ ಸ್ಪೀಕರ್ ಲಾಲ್ಬಿಯಾಕ್ಜಮಾ, ಉಪಸಭಾಪತಿ ಲಾಲ್ಫಾಮಕಿಮಾ, ಸಂಸದರು, ಪ್ರಮುಖ ಅಧಿಕಾರಿಗಳು ಮತ್ತು ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ.

ವಿಕೆ ಸಿಂಗ್ ಅವರಿಗೆ ಗೌಹಾಟಿ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರು ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.

ರಘುಬರ್ ದಾಸ್ ರಾಜೀನಾಮೆಯ ನಂತರ ಇತ್ತೀಚೆಗೆ ಒಡಿಶಾ ಗವರ್ನರ್ ಆಗಿ ನೇಮಕಗೊಂಡಿರುವ ಹರಿಬಾಬು ಕಂಬಂಪತಿ ಅವರಿಂದ ತೆರವಾದ ಮಿಜೋರಾಂ ರಾಜ್ಯಪಾಲರ ಹುದ್ದೆಯನ್ನು ಸಿಂಗ್ ಅಲಂಕರಿಸಲಿದ್ದಾರೆ.

1951 ರಲ್ಲಿ ಜನಿಸಿದ ವಿಕೆ ಸಿಂಗ್ ಅವರು, 2010 ರಿಂದ 2012 ರವರೆಗೆ 24ನೇ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.

ಮಿಲಿಟರಿಯಿಂದ ನಿವೃತ್ತರಾದ ನಂತರ ಅವರು 2014 ರಲ್ಲಿ ಬಿಜೆಪಿ ಸೇರಿದರು ಮತ್ತು ಉತ್ತರ ಪ್ರದೇಶದ ಗಾಜಿಯಾಬಾದ್‌ನಿಂದ ಲೋಕಸಭೆಗೆ ಆಯ್ಕೆಯಾದರು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಅವಧಿಯಲ್ಲಿ, ಸಿಂಗ್ ಅವರು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!