ಚೀನಾ ಫಿನ್‌ ಟೆಕ್‌ ದೈತ್ಯ ʼಆಂಟ್ ಗ್ರೂಪ್‌ʼ ನಿಂದ ಹೊರಬೀಳಲಿದ್ದಾರೆ ಜಾಕ್‌ ಮಾ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚೀನಾದ ಫಿನ್‌ ಟೆಕ್‌ ದೈತ್ಯ ಕಂಪನಿ ʼಆಂಟ್‌ ಗ್ರುಪ್‌ʼ ನಿಂದ ಸಂಸ್ಥಾಪಕ ಜಾಕ್‌ ಮಾ ಹೊರಬೀಳಲಿದ್ದಾರೆ. ಅವರು ತಮ್ಮ ಹೆಚ್ಚಿನ ಮತದಾನದ ಹಕ್ಕುಗಳನ್ನು ಬಿಟ್ಟುಕೊಡಲಿದ್ದು ಕಂಪನಿಯ ಮೇಲೆ ನಿಯಂತ್ರಣ ಹೊಂದಿರುವುದಿಲ್ಲ ಎಂದು ಮೂಲಗಳ ವರದಿಯೊಂದು ತಿಳಿಸಿದೆ.

ಇತ್ತೀಚೆಗಷ್ಟೇ ಕಂಪನಿಯ ಕೆಲ ನಿಯಮಗಳನ್ನು ಮರುಹೊಂದಿಸಲಾಗಿದ್ದು ಯಾವುದೇ ಷೇರುದಾರರು, ಏಕಾಂಗಿಯಾಗಿ ಅಥವಾ ಇತರ ಪಕ್ಷಗಳೊಂದಿಗೆ ಜಂಟಿಯಾಗಿ ಹೊಂದಾಣಿಕೆಯ ನಂತರ ಆಂಟ್‌ ಗುಂಪಿನ ಮೇಲೆ ನಿಯಂತ್ರಣ ಹೊಂದಿರುವುದಿಲ್ಲ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಬಿಲಿಯನೇರ್ ಜಾಕ್‌ ಮಾ ಅಕ್ಟೋಬರ್‌ನಲ್ಲಿ ಹಣಕಾಸು ನಿಯಂತ್ರಕರು ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಟೀಕಿಸಿದ ನಂತರ ಚೀನಾ ಸರ್ಕಾರವು ಆಂಟ್‌ ಗುಂಪಿನ IPO ಅನ್ನು ನಿಲ್ಲಿಸಿತ್ತು.

ಹೊಸತನವನ್ನು ಸರ್ಕಾರ ನಿಗ್ರಹಿಸುತ್ತಿದೆ ಎಂದು ಜಾಕ್‌ ಮಾ ಟೀಕಿಸಿದ್ದರು. ಜಾಗತಿಕ ಬ್ಯಾಂಕಿಂಗ್ ನಿಯಮಗಳು ಬಹಳ ಹಳೇಯದಾಗಿವೆ ಎಂದಿದ್ದರು . ಚೀನಾವು ಘನ ಆರ್ಥಿಕ ಪರಿಸರ ವ್ಯವಸ್ಥೆಯನ್ನು ಹೊಂದಿಲ್ಲ ಎಂದು ಮಾ ಟೀಕಿಸಿದ್ದರು. ಚೀನಾದ ಅಧಿಕಾರಿಗಳ ಮೇಲಿನ ಅವರ ಟೀಕೆಯು ಆ ಸಮಯದಲ್ಲಿ ಅವರಿಗೆ ದೊಡ್ಡ ವೆಚ್ಚವನ್ನು ತೆರುವಂತೆ ಮಾಡಿತ್ತು. ಅಂದಿನಿಂದ, ಚೀನಾದ ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ನಿಯಂತ್ರಕಗಳ ಮೂಲಕ ಅವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಪ್ರಸ್ತುತ ಆಂಟ್‌ ಗ್ರುಪ್‌ ನ ಮೇಲಿನ ನಿಯಂತ್ರಣವನ್ನು ಅವರು ತೊರೆಯಲೂ ಕೂಡ ಇದೇ ಕಾರಣ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!