Sunday, June 26, 2022

Latest Posts

ಬಹಳ ರುಚಿ ಈ ಹಲಸಿನಹಣ್ಣಿನ ಕೊಟ್ಟೆ ಕಡುಬು.. ಹೇಗೆ ಮಾಡೋದು ನೋಡಿ ಈಸಿ ರೆಸಿಪಿ…

ಹಲಸಿನ ಹಣ್ಣಿನ ಕಡುಬು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಅದೇ ಹಲಸಿನ ಹಣ್ಣಿನ ಕೊಟ್ಟೆ ಕಡುಬು ಗೊತ್ತಿರುವುದಿಲ್ಲ. ಹೇಗೆ ಮಾಡೋದು ಈ ರೆಸಿಪಿ ನೋಡಿ..

ಬೇಕಾಗುವ ಸಾಮಗ್ರಿಗಳು:

ಅಕ್ಕಿ 2 ಕಪ್( ಚೆನ್ನಾಗಿ ತೊಳೆದು 3 ಗಂಟೆ ಕಾಲ ನೆನೆ ಹಾಕಿ)
ಬೆಲ್ಲ 1/2 ಕಪ್
ಉಪ್ಪು ರುಚಿಗೆ ತಕ್ಕಷ್ಟು.
ಬಾಳೆ ಎಲೆ ಒರೆಸಿ ಬಾಡಿಸಿ ಇಡಿ
ಹಲಸಿನ ಹಣ್ಣು 2 ಕಪ್ (ಜಾರ್ ಗೆ ಹಾಕಿ ತರಿ ತರಿಯಾಗಿ ರುಬ್ಬಿ)

ಮಾಡುವ ವಿಧಾನ.

  • ನೆನೆ ಹಾಕಿದ ಅಕ್ಕಿಗೆ ಉಪ್ಪು ,ಬೆಲ್ಲ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. (ನೀರು ಜಾಸ್ತಿ ಹಾಕ ಬಾರದು)
  • ನುಣ್ಣಗೆ ರುಬ್ಬಿದ ಅಕ್ಕಿ ಹಿಟ್ಟಿಗೆ ತರಿ ತರಿಯಾಗಿ ರುಬ್ಬಿದ ಹಲಸಿನ  ಹಣ್ಣನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. (ಹಿಟ್ಟು ನೀರು ಆಗಿದ್ದರೆ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ. )
  • ಬಾಡಿಸಿ ಇಟ್ಟ ಬಾಳೆ ಎಲೆಯನ್ನು ನಳಿಕೆ ತರ ಸುತ್ತಿಕೊಂಡು ಒಂದು ಕಡೆ ಕಟ್ಟಿಕೊಳ್ಳಿ. ಆಮೇಲೆ ಆ ಎಲೆಯೊಳಗೆ ಅಕ್ಕಿಹಿಟ್ಟಿನ ಮಿಶ್ರಣವನ್ನು ಹಾಕಿ ಮತ್ತೊಂದು ಬದಿಯನ್ನೂ ಕಟ್ಟಿ.
  • ನಂತರ ಹಬೆ ಪಾತ್ರೆಗೆ ನೀರು ಹಾಕಿ. ಹಬೆ ಯಲ್ಲಿ 1 ಗಂಟೆ ಬೇಯಿಸಿದರೆ ಹಲಸಿನ ಹಣ್ಣಿನ ಕೊಟ್ಟೆ ಕಡುಬು ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss