Monday, August 15, 2022

Latest Posts

ಜಗದ್ಗುರು ಮುರುಘರಾಜೇಂದ್ರ ವಿವಿಗೆ ಕುಲಪತಿ, ಕುಲಸಚಿವರ ನೇಮಕ

ಹೊಸ ದಿಗಂತ ವರದಿ, ಚಿತ್ರದುರ್ಗ:

ನಗರದ ಎಸ್.ಜೆ.ಎಂ. ವಿದ್ಯಾಪೀಠದ ವತಿಯಿಂದ ಶೀಘ್ರದಲ್ಲೇ ಆರಂಭಗೊಳ್ಳಲಿರುವ ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳನ್ನಾಗಿ ಡಾ.ಎಸ್. ಮೋಹನ್‌ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಕುಲಸಚಿವರನ್ನಾಗಿ ಡಾ. ಜಿತೇಂದ್ರಸಿಂಗ್ ಶೆಖಾವತ್ ಅವರನ್ನು ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಶಿವಮೂರ್ತಿ ಮುರುಘಾ ಶರಣರು ನೇಮಕ ಮಾಡಿದ್ದಾರೆ.
ಡಾ.ಎಸ್. ಮೋಹನ್‌ಕುಮಾರ್, ರೋಬೋಟಿಕ್ಸ್ ಅಂಡ್ ಆಟೋಮೇಷನ್ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಸಲ್ಲಿಸಿ ಸಾಧನೆ ಮಾಡಿದ್ದಾರೆ. ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ಹಾಸನ, ಎಸ್‌ಡಿಎಂಸಿಇಟಿ ಧಾರವಾಡ ಇಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದು, 40 ವರ್ಷ ಬೋಧನಾನುಭವ ಹಾಗೂ 150ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಯುವ ವಿಜ್ಞಾನಿ (1991) ಹಾಗೂ ರಾಜ್ಯ ಸರ್ಕಾರದಿಂದ ಸರ್ ಸಿ.ವಿ. ರಾಮನ್ ಯುವವಿಜ್ಞಾನಿ (1997) ಪ್ರಶಸ್ತಿ ಪಡೆದಿದ್ದಾರೆ.
ನೂತನ ಕುಲಸಚಿವ ಡಾ. ಜಿತೇಂದ್ರಸಿಂಗ್ ಶೆಖಾವತ್ ಆಯುರ್ವೇದ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಸೈನ್ಸಸ್, ಮದರ್‌ವುಡ್ ಇನ್ಸಿಟಿಟ್ಯೂಷನ್ಸ್, ರೋರ್‌ಕೀ, ಉತ್ತರಖಂಡ್‌ನ ನಿರ್ದೇಶಕರಾಗಿ, ರಾಜೀವಗಾಂಧಿ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಗಣಕೀಕೃತ ಪರೀಕ್ಷಾ ವಿಧಾನದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಸಮಾಜ ಸೇವೆಗಾಗಿ 2011-12ನೇ ಸಾಲಿನ ಇಂದಿರಾ ಗಾಂಧಿ ರಾಷ್ಟ್ರೀಯ ಎನ್‌ಎಸ್‌ಎಸ್ ಅವಾರ್ಡ್‌ನ್ನು ರಾಷ್ಟ್ರಪತಿಗಳಿಂದ ಹಾಗೂ ಕರ್ನಾಟಕ ರಾಜ್ಯಪಾಲರಿಂದ ಅತ್ಯುತ್ತಮ ಎನ್‌ಎಸ್‌ಎಸ್ ಅಧಿಕಾರಿ ಪ್ರಶಸ್ತಿ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸಲಹೆಗಾರರಾದ ಡಾ. ಸಂಗಮೇಶ್, ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss