Wednesday, August 17, 2022

Latest Posts

ಜಗದ್ಗುರು ಸಾರಂಗಧರ ಶ್ರೀಗಳ ಜನ್ಮದಿನ: ಅಪ್ಪಾ ಪ್ರಶಸ್ತಿ ಪ್ರದಾನ

ಹೊಸ ವರದಿ, ಕಲಬುರಗಿ:

ಪೂಜ್ಯ ಶ್ರೀ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಸಾರಂಗಮಠ ಶ್ರೀಶೈಲಂ ಹಾಗೂ ಸುಲಫಲ ಮಠ ಶಹಾಬಜಾರ ಇವರ 52ನೇ ಜನ್ಮ ದಿನದ ಅಂಗವಾಗಿ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ,ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾ ವಿದ್ಯಾಲಯ ಕಲಬುರಗಿ ವತಿಯಿಂದ 2019-20ನೇ ಸಾಲಿನ ಅಪ್ಪ ಪ್ರಶಸ್ತಿಯನ್ನು ಶರಣಬಸವೇಶ್ವರ ಸಂಸ್ಥಾನದ ಚೇರ್ ಪರಸನ್ ಪೂಜ್ಯ ಡಾ. ದಾಕ್ಷಾಯಿಣಿ ಅವ್ವನವರು ನೀಡಿ ಗೌರವಿಸಿದರು.
ನಾಡಿನ ಜನತೆಗೆ ದಾಸೋಹ ಮಾಡುತ್ತಾ ಪರಂಪರೆಯನ್ನು ಸಾರುತ್ತಾ ಬಂದಿರುವ ಶ್ರೀ ಶರಣಬಸವೇಶ್ವರ ಸಂಸ್ಥಾನವು ನನಗೆ ಇಂದು ಸನ್ಮಾನಿಸಿ ಗೌರವಿಸಿದ್ದಕ್ಕೆ ನನ್ನ ಜೀವನ ಸಾರ್ಥಕತೆಯಾಗಿದೆ. ಪೂಜ್ಯ ಡಾ, ದಾಕ್ಷಾಯಿಣಿ ಅವ್ವನವರಿಂದ ಅಪ್ಪ ಪ್ರಶಸ್ತಿ ಸ್ವೀಕರಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಮಹಾ ವಿದ್ಯಾಲಯದ ಸಿಬ್ಬಂದಿಗಳಿಗೆ ಜಗದ್ಗುರು ಸಾರಂಧರ ದೇಶಿಕೇಂದ್ರ ಸ್ವಾಮೀಜಿಗಳು ಶಾಲು ಹೊದಿಸಿ, ಆಶಿರ್ವಾದ ನೀಡಿದರು. ಬಸವರಾಜ ದೇಶಮುಖ, ಡಾ.ನೀಲಾಂಬಿಕಾ ಶೇರಿಕಾರ, ಚವದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು ಸೇರಿದಂತೆ ಅನೇಕು ಪೂಜ್ಯರು ಇದ್ದರು.
ರಾಜು ಲೇಂಗಟಿ, ಪಾಲಿಕೆ ಸದಸ್ಯರಾದ ಪ್ರಭುಲಿಂಗ ಹಾದಿಮನಿ, ಈರಣ್ಣ ಗೊಳೆದ, ಮಲ್ಲಿಕಾರ್ಜುನ ಖೇಮಜಿ, ರಾಜು ಕಪನೂರ, ಸಚಿನ ಕಡಗಂಚಿ,ವಿಜಯಕುಮಾರ ಬಂಗಾರೆ, ಹಣಮಂತರಾಯ ಬಿರದಾರ, ವಿಜಯಕುಮಾರ ಸೇರಿದಂತೆ ಮಠದ ಭಕ್ತಾದಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!