ಕಾರ್ಯಕರ್ತರಿಗೆ ದ್ರೋಹ ಮಾಡಿದ ಜಗದೀಶ ಶೆಟ್ಟರ್: ಅರವಿಂದ ಬೆಲ್ಲದ ವಾಗ್ದಾಳಿ

ಹೊಸದಿಗಂತ ವರದಿ, ಹುಬ್ಬಳ್ಳಿ:

ಕೇವಲ ಒಂದು ರ್ನಿಷ್ಟ ಸಮುದಾಯಕ್ಕೆ ಸೀಮಿತವಾಗಿದ್ದ ಜಗದೀಶ ಶೆಟ್ಟರ ಅವರನ್ನು ಬಿಜೆಪಿ, ಕಾರ್ಯಕರ್ತರು ತಮ್ಮ ಜೀವನ ಹಾಗೂ ಜೀವ ನೀಡಿ ಪ್ರಭಾವಿ ರಾಜಕಾರಣಿಯಾಗಿ ರೂಪಿಸಿದ್ದರು. ಅಂತಹ ಕಾರ್ಯಕರ್ತರಿಗೆ ಈಗ ದ್ರೋಹ ಮಾಡಿ ಕಾಂಗ್ರೆಸ್ ಸೇರಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೩೦ ವರ್ಷದಿಂದ ಬಿಜೆಪಿ ಕಟ್ಟಿ, ಇಲ್ಲಿ ಆಡಿಬೆಳೆದು ಈಗ ಅಕಾರದಾಸೆಗೆ ಬಿಜೆಪಿ ತೊರೆದಿದ್ದಾರೆ. ಇದರಿಂದ ಕಾರ್ಯಕರ್ತರಿಗೆ ಚುಚ್ಚಿದಷ್ಟು ನೋವಾಗಿದೆ ಎಂದರು.

ಜಗದೀಶ ಶೆಟ್ಟರಗೆ ಬಿಜೆಪಿ ರಾಷ್ಟ್ರೀಯತೆ, ಸಾಮಾಜಿಕ ಸೇವೆ ಕಲಿಸಿತ್ತು. ಸಿಎಂ ಸ್ಥಾನದಿಂದ ಹಿಡಿದು ಎಲ್ಲ ಸ್ಥಾನ ಮಾನ ಸಹ ನೀಡಿ ಗೌರವಿಸಿತ್ತು. ಅವರ ತಮ್ಮ ಪ್ರದೀಪ ಶೆಟ್ಟರ ಅವರಿಗೂ ವಿಧಾನ ಪರಿಷತ ಸ್ಥಾನ ನೀಡಿದೆ ಎಂದರು.

ಪಕ್ಷದ ಕಾರ್ಯಕರ್ತರ ಶ್ರಮದಿಂದ ಈ ಮಟ್ಟಕ್ಕೆ ಅವರು ಬೆಳೆದಿದ್ದಾರೆ. ಕೇಂದ್ರದ ವರಿಷ್ಠರು ಸಹ ಅವರಿಗೆ ರಾಜ್ಯಸಭಾ ಸದಸ್ಯತ್ವ ಸ್ಥಾನ ನೀಡುತ್ತೇನೆ ಎಂದಿದ್ದರು. ಇದಕ್ಕೆ ಒಪ್ಪದ ಅವರು ಕಾಂಗ್ರೆಸ್ ಸೇರಿದ್ದಾರೆ.
ಜಗದೀಶ ಶೆಟ್ಟರ ತತ್ವ ಸಿದ್ಧಾಂತ ಬಗ್ಗೆ ಮಾತನಾಡುವ ಇವರು, ಮಂತ ನಾಯಕರಾಗಿದ್ದರೆ ಪಕ್ಷಾತೀತವಾಗಿ ನಿಲ್ಲಬೇಕಿತ್ತು. ಅದನ್ನು ಬಿಟ್ಟು ಭಯೋತ್ಪದನೆಗೆ ಪ್ರೋತ್ಸಾಹಿಸುವ, ರಾಷ್ಟ್ರ ವಿರೋಧ ನೀತಿಗೆ ಬೆಂಬಲಿಸುವ ಪಕ್ಷಕ್ಕೆ ಸೇರಿದ್ದು, ಬೇಸರ ಸಂಗತಿಯಾಗಿದೆ ಎಂದರು.

ಬಿಜೆಪಿ ಲಿಂಗಾಯತ ಸಮುದಾಯಕ್ಕೆ ಯಾವತ್ತು ಕಡೆಗಣಿಸಿಲ್ಲ. ಜಗದೀಶ ಶೆಟ್ಟರ, ಬಿ.ಎಸ್. ಯಡಿಯೂರಪ್ಪ, ಬಸಗೌಡ ಪಾಟೀಲ ಯತ್ನಾಳ, ಭಗವಂತ ಕೂಬಾ, ಸುರೇಶ ಅಂಗಡಿ ಅವರಿಗೆ ಉತ್ತಮ ಸ್ಥಾನ ನೀಡಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಗ್ರಾಮಾಂತರ ಜಿಲ್ಲಾಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ, ಕುಂದಗೋಳ ಕ್ಷೇತ್ರದ ಅಭ್ಯರ್ಥಿ ಎಂ.ಆರ್. ಪಾಟೀಲ, ಕಲಘಟಗಿ ಕ್ಷೇತ್ರದ ಅಭ್ಯರ್ಥಿ ನಾಗರಾಜ ಛಬ್ಬಿ, ಪ್ರಶಾಂತ ಕೆ. ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!