ದೆಹಲಿಗೆ ಹೋಗೋ ಮುನ್ನ ಮಹತ್ವದ ಹೇಳಿಕೆ ನೀಡಿದ ಜಗದೀಶ್ ಶೆಟ್ಟರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನೇನು ಎರಡು ದಿನ ಬಾಕಿ ಇದೆ ಎನ್ನುವಾಗ ಬಿಜೆಪಿ ಕಡೆಗೂ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದೆ.

ಈ ಪಟ್ಟಿಯಲ್ಲಿ ಕೆಲವು ಹಾಲಿ ಶಾಸಕರನ್ನು ಹೈ ಕಮಾಂಡ್ ಕೈ ಬಿಟ್ಟಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೂ ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡಿಲ್ಲ. ತೀವ್ರ ಅಸಮಾಧಾನಗೊಂಡಿರುವ ಶೆಟ್ಟರ್ ಅವರಿಗೆ ಹೈ ಕಮಾಂಡ್ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದು, ಇಂದು ಶೆಟ್ಟರ್ ದೆಹಲಿಗೆ ತೆರಳುತ್ತಿದ್ದಾರೆ.

ಈ ಮಧ್ಯೆ ಮಾತನಾಡಿದ್ದು, ನನ್ನನ್ನು ದೆಹಲಿಗೆ ಕರೆದಿದ್ದಾರೆ, ಬಿಎಸ್‌ವೈ ಅವರನ್ನು ಭೇಟಿ ಮಾಡಬೇಕಿತ್ತು. ಆದರೆ ಸಮಯದ ಅಭಾವದಿಂದ ಸೀದ ದೆಹಲಿಗೆ ಹೋಗ್ತಿದ್ದೇನೆ. ಮಂತ್ರಿ ಸ್ಥಾನ ಇಲ್ಲದಿದ್ದರೂ ಎರಡು ವರ್ಷ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಮಂತ್ರಿ ಸ್ಥಾನ ಇಲ್ಲದೆಯೂ ಕೆಲಸ ಮಾಡಬಹುದು ಎನ್ನುವುದನ್ನು ತೋರಿಸಿದ್ದೇನೆ.

ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ. ರಾಜಕೀಯದಲ್ಲಿ ಗೌರವಯುತವಾಗಿ ನಿವೃತ್ತಿ ಹೊಂದಬೇಕು ಆದರೆ ಈ ರೀತಿ ಹೊರಗಡೆ ಹೋಗಬಾರದು. ಸೀನಿಯರ್ ಎನ್ನುವ ಕಾರಣಕ್ಕೆ ಟಿಕೆಟ್ ಕೊಟ್ಟಿಲ್ಲ ಎನ್ನೋದನ್ನು ಒಪ್ಪೋದಿಲ್ಲ. ಟಿಕೆಟ್ ಸಿಕ್ಕ ಎಷ್ಟೋ ಮಂದಿ ಸೀನಿಯರ‍್ಸ್ ಆಗಿದ್ದಾರೆ. ಪಾಸಿಟಿವ್ ರೆಸ್ಪಾನ್ಸ್ ಸಿಗುವ ಸೂಚನೆ ಇದೆ ನೋಡೋಣ ಎಂದಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!