spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಾಂತಿಬಾಬು ಬಂದು ರಾಜಣ್ಣ ಹೋಗಿಬಿಟ್ಟರು ಎಂದ ಕೆಲ ನಿಮಿಷ ಏನು ಕಾಣಲಿಲ್ಲ, ಏನು ಕೇಳಲಿಲ್ಲ!

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇಂದು ನಟ ಸಾರ್ವಭೌಮ , ಕನ್ನಡ ಕಣ್ಮಣಿ ಡಾ. ರಾಜ್ ಕುಮಾರ್ ಅವರ 15ನೇ ಪುಣ್ಯತಿಥಿ.  ಮೊದಲಿನಿಂದಲೂ ದೊಡ್ಮನೆ ಕುಟುಂಬಕ್ಕೆ ಆಪ್ತರಾಗಿರುವ ನಟ ಜಗ್ಗೇಶ್ ಅಣ್ಣಾವ್ರು ಕಾಲವಾದ ದಿನವನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.

ರಾಜ್ ಕುಮಾರ್ ಅವರ ಸಾವಿನ ಸುದ್ದಿ ಕೇಳಿ ತಮಗಾದ ಆಘಾತವನ್ನೂ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಏಪ್ರಿಲ್ 2006 ಮಧ್ಯಾಹ್ನ 1 ಗಂಟೆಗೆ ಪಾಂಡವರು ಚಿತ್ರದ ಊಟದ ವಿರಾಮ. ಶ್ರೀರಂಗಪಟ್ಟಣದ ಕುಂತಿಬೆಟ್ಟದ ರಸ್ತೆಯಲ್ಲಿನ ಮನೆ. ಅಂದು ಅಂಬರೀಶ ರವರ ಅಭಿಮಾನಿ ಮನೆಯಿಂದ ವಿಶೇಷ ಊಟದ ವ್ಯವಸ್ಥೆ ಇತ್ತು. ಅಂದು ಅಂಬರೀಶರವರೆ ಎಲ್ಲರಿಗು ಪ್ರೀತಿಯಿಂದ ಊಟಬಡಿಸಿ ತಾವು ತಿಂದರು. ಆಗ ಕ್ಯಾರಾವಾನ್ ವ್ಯವಸ್ಥೆ ಇರದ ಕಾರಣ ಎಲ್ಲ ನಟರು ಅವರವರ ಕಾರಿನಲ್ಲಿ AC ಹಾಕಿ ವಿಶ್ರಾಂತಿ ಪಡಿಯುವ ಅಭ್ಯಾಸ.

ನಾನು ಊಟ ಆದಮೇಲೆ 1/2 ಗಂಟೆ ಮಲಗುವೆ. ನನಗೆ ತೊಂದರೆಕೊಡದಂತೆ ಸಹಾಯಕರು ಕಾವಲು ಇರುತ್ತಾರೆ. ನಾನು ಏಳುವವರೆಗೂ ಯಾರು ಹತ್ತಿರಬರೋಲ್ಲಾ. ಆ ನಂಬಿಕೆಯಲ್ಲೆ ನಿದ್ರೆಗೆ ಜಾರಿದೆ. ಇದ್ದಕ್ಕಿದ್ದಂತೆ ವಾಂತಿಬಾಬು ಕಿಟಕಿ ಜೋರಾಗಿ ತಟ್ಟಿದ ಸಿಟ್ಟು ನೆತ್ತಿಗೇರಿತು.ಕಾರಣ ಕೇಳಲು ಬಾಗಿಲು ತೆರೆದೆ, ವಾಂತಿಬಾಬು ರಾಜಣ್ಣ ಹೋಗಿಬಿಟ್ಟರು ಎಂದ ಕೆಲನಿಮಿಷ ಏನು ಕಾಣಲಿಲ್ಲಾ, ಕೇಳಲಿಲ್ಲಾ.

ನನ್ನ ತಂದೆ ಸತ್ತಾಗಲು ಹಾಗೆ ಆಯಿತು. ಯಾರಿಗೂ ಹೇಳದೆ ಹೊರಟವನೇ ಅಣ್ಣನ ಚಿತಾವಾಹನ ತಲುಪಿದೆ. ಕೊನೆವರೆಗೂ ಜೊತೆಯಿದ್ದು ಬಾಲ್ಯದಿಂದ ಕಂಡ ರಾಜಣ್ಣನ ಪಾತ್ರ ಹಾಗು ಅವರ ಸಾಂಗತ್ಯ ಮಾತ್ರ ನೆನಪಾಗುತ್ತಿತ್ತು. ಇತಿಹಾಸ ನೆನಪಿನ ಅಂಗಳಕ್ಕೆ ಜಾರಿತು. ರಾಜಣ್ಣ ನನ್ನ ಹೃದಯದಲ್ಲೆ ಲೀನವಾದರು.ಮತ್ತೆ ಬನ್ನಿ ಅಣ್ಣ ಎಂದು ಟ್ವೀಟ್ ಮೂಲಕ ಭಾವಿಕರಾಗಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss