ಪುಟಾಣಿ ಮಕ್ಕಳಿಗಾಗಿ ʻಜೈ ಬಜರಂಗಬಲಿʼ ಸ್ಪರ್ಧೆ: ಹನುಮಾನ್‌ ವೇಷ ಹಾಕಿಸಿ, ಬಹುಮಾನ ಗೆಲ್ಲಿರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಾಲೆಗಳಿಗೆ ಬೇಸಿಗೆ ರಜೆ ಇರುವ ಈ ಸಮಯದಲ್ಲಿ ವಿಶೇಷವಾಗಿ ಮುದ್ದು ಮಕ್ಕಳಿಗಾಗಿ ಸಂವಾದ ಚಾನೆಲ್ ಸಹಯೋಗದೊಂದಿಗೆ ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದ ಮೇರೆಗೆ ಯುವ ಬ್ರಿಗೇಡ್ ಸಂಘಟನೆ ರಾಜ್ಯಮಟ್ಟದ ಹನುಮ ವೇಷಧಾರಣೆ ʻಜೈ ಬಜರಂಗಬಲಿʼ ಸ್ಪರ್ಧೆ ಏರ್ಪಡಿಸಿದೆ. ಮಕ್ಕಳು ಹನುಮಂತನ ವೇಷ ಧರಿಸಿ ಫೋಟೋವನ್ನು 7019010048 ಸಂಖ್ಯೆಗೆ ವಾಟ್ಸಾಪ್ ಮುಖಾಂತರ ಕಳುಹಿಸಲು ಆಯೋಜಕರು ವಿನಂತಿಸಿದ್ದಾರೆ.

14 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಭಾಗವಹಿಸುವ ಅವಕಾಶವಿದ್ದು ಮೊದಲ ಬಹುಮಾನ ರೂ. 10,000
ದ್ವಿತಿಯ ಬಹುಮಾನ ರೂ. 5,000 ಮತ್ತು
ತೃತೀಯ ಬಹುಮಾನ ರೂ. 3,000 ಇರಲಿದೆ.

ಜತೆಗೆ ವಿಜೇತರಾದ ಮೂವರು ಮಕ್ಕಳಿಗೆ ರಾಮಾಯಣ ಪುಸ್ತಕ ಕೊಡುಗೆಯಾಗಿ ಸಿಗಲಿದೆ. ಫೋಟೋ ಕಳಿಸಲು ಕೊನೆಯ ದಿನಾಂಕ ಮೇ 10 ರ ಸಂಜೆ 6.00 ಗಂಟೆಯವರೆಗೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!