ಶತಮಾನಗಳ ಭಾರತ ಇಸ್ರೇಲ್‌ ಸಂಬಂಧವನ್ನು ಶ್ಲಾಘಿಸಿದ ಜೈಶಂಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಭಾರತ ಮತ್ತು ಇಸ್ರೇಲ್ ವಿಶೇಷ ಸಂಬಂಧವನ್ನು ಹೊಂದಿವೆ. 2017 ರ ಮೋದಿ ಭೇಟಿಯ ನಂತರ ಭಾರತ ಮತ್ತು ಇಸ್ರೇಲ್‌ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ. ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಹೇಳಿದ್ದಾರೆ.
ಇಸ್ರೇಲ್‌ನ 74 ನೇ ಸ್ವಾತಂತ್ರ್ಯದ ಸಂಭ್ರಮಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು “ಮೋದಿ ಭೇಟಿಯ ಸಂತರ ಭಾರತ ಮತ್ತು ಇಸ್ರೇಲ್‌ ನಸಡುವಿನ ಸಂಬಂಧ ನಿಜವಾಗಿ ಪ್ರಾರಂಭವಾಗಿದೆ. ನಾವೀನ್ಯತೆ ಮತ್ತು ಸಂಶೋಧನೆಯಲ್ಲಿ ಸಹಕಾರದ ಜೊತೆಗೆ ಜ್ಞಾನ ಆಧಾರಿತ ಸಂಬಂಧವನ್ನು ವಿಸ್ತರಿಸಲು ಎರಡೂ ದೇಶಗಳು ಗಮನಹರಿಸುತ್ತಿವೆ. ಎರಡೂ ದೇಶಗಳು ಹಲವಾರು ಶತಮಾನಗಳ ಹಿಂದಿನ ನಾಗರಿಕತೆಯ ಬಾಂಧವ್ಯವನ್ನು ಹೊಂದಿವೆ” ಎಂದು ಹೇಳಿದ್ದಾರೆ.

“ಭಾರತವು ಉಸ್ರೇಲ್‌ ಸಮುದಾಯದ ಉಪಸ್ಥಿತಿಯಿಂದ ಇನ್ನಷ್ಟು ಶ್ರೀಮಂತವಾಗಿದೆ.ಪ್ರಸಿದ್ಧ ನಟರು, ಕೈಗಾರಿಕೋದ್ಯಮಿಗಳು, ಶಿಕ್ಷಕರು ಮತ್ತು ಸೇನೆಯ ಜನರಲ್‌ ಗಳಾಗಿ ಭಾರತಕ್ಕೆ ಇಸ್ರೇಲಿಗರ ಕೊಡುಗೆ ಅನನ್ಯವಾಗಿದೆ. ಭದ್ರತೆ, ಕೃಷಿ, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಇಸ್ರೇಲಿನ ಸ್ವಾತಂತ್ರ್ಯ ದಿನಾಚರಣೆಯೊಂದಿಗೆ  ಪ್ರಸ್ತುತ ಭಾರತ ಮತ್ತು ಇಸ್ರೇಲ್ ನಡುವಿನ  ರಾಜತಾಂತ್ರಿಕ ಸಂಬಂಧದ ಸ್ಥಾಪನೆಯ 30 ವರ್ಷಗಳನ್ನು ಆಚರಿಸಲಾಗುತ್ತಿದೆ. ” ಎಂದು ಅವರು ಶ್ಲಾಘಿಸಿದ್ದಾರೆ.

ಇದೇ ಸಂದರ್ಭದಲ್ಲಿ ಇಸ್ರೇಲ್ ‘ಮೇಕ್ ಇನ್ ಇಂಡಿಯಾ’ ಉಪಕ್ರಮಗಳ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದ ಅವರು ಭಾರತ, ಇಸ್ರೇಲ್, ಯುಎಇ ಮತ್ತು ಯುಎಸ್ ಒಳಗೊಂಡಿರುವ ಹೊಸ ಕ್ವಾಡ್ ಅನ್ನು ಉಲ್ಲೇಖಿಸಿ ಆ ಪ್ರದೇಶದಲ್ಲಿ ಆರ್ಥಿಕ ಸಹಕಾರ ಹೆಚ್ಚಿಸುವಲ್ಲಿ ಈ ʼಕ್ವಾಡ್‌ʼ ಪ್ರಮುಖ ಪಾತ್ರ ವಾಹಿಸಿದೆ ಎಂದು ಹೇಳಿದ್ಧಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!