ಚರ್ಚೆ ಎಬ್ಬಿಸಿದ ಸೂರತ್ ರೈಲ್ವೆ ನಿಲ್ದಾಣದ ಜೈ ಶ್ರೀರಾಂ ಸಾಲುಗಳು

ಹೊಸ ದಿಗಂತ ಡಿಜಿಟಲ್ ಡೆಸ್ಕ್ :

ಸೂರತ್ ರೈಲು ನಿಲ್ದಾಣದಲ್ಲಿ ರೈಲುಗಳ ವೇಳಾಪಟ್ಟಿಯನ್ನು ಸೂಚಿಸುವ ಎಲೆಕ್ಟ್ರಾನಿಕ್ ಪರದೆಯ ಮೇಲುಗಡೆ ಪ್ರದರ್ಶಿಸಲಾಗುತ್ತಿರುವ ಸಾಲುಗಳ ಬಗ್ಗೆ ಟ್ವಿಟ್ಟರ್ ಸಾಮಾಜಿಕ ಜಾಲತಾಣದಲ್ಲಿ ಭಾನುವಾರ ಭಾರಿ ಚರ್ಚೆಯೇ ತೆರೆದುಕೊಂಡಿತ್ತು.

ಧರ್ಮೋ ರಕ್ಷತಿ ರಕ್ಷಿತಃ ಮತ್ತು ಜೈ ಶ್ರೀರಾಂ ಎಂಬ ಸಾಲುಗಳು ಈ ವೇಳಾಪಟ್ಟಿ ಸೂಚಕದ ಮೇಲ್ಭಾಗದಲ್ಲಿ ಪ್ರದರ್ಶನಗೊಳ್ಳುತ್ತಿರುವುದೇ ಚರ್ಚೆಗೆ ಕಾರಣ.

 

ಸಾರ್ವಜನಿಕ ಸ್ವತ್ತಿನಲ್ಲಿ ಧಾರ್ಮಿಕ ಘೋಷಗಳಿಗೆ ಸಂವಿಧಾನ ಸಮ್ಮತಿಸುತ್ತದೆಯೇ ಎಂದು ಕೆಲವರು ಟ್ವಿಟ್ಟರಿನಲ್ಲಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ದಾಖಲಿಸಿರುವ ಹಿಂದೂಪರ ಸಾಮಾಜಿಕ ಜಾಲತಾಣ ಬಳಕೆದಾರರು- “ಅವೆಷ್ಟೋ ರೈಲು ನಿಲ್ದಾಣಗಳಲ್ಲಿ ಪ್ಲಾಟ್ಫಾರ್ಮ್ ಮೇಲೆಯೇ ಇಸ್ಲಾಮಿನ ದರ್ಗಾಗಳಿವೆ. ವೇಳಾಪಟ್ಟಿ ಸೂಚಿಯ ಮೇಲ್ಭಾಗದಲ್ಲಿ ಜೈ ಶ್ರೀರಾಂ ಎಂದಿರುವುದಕ್ಕೆ ಆಕ್ಷೇಪಿಸುವವರು ಮತ್ತು ಇಲ್ಲಿ ಸೆಕ್ಯುಲರ್ ವಾದ ತರುವವರು ಆ ಬಗ್ಗೆ ಸುಮ್ಮನಾಗುತ್ತಾರೇಕೆ” ಎಂದು ಪ್ರತಿಪ್ರಶ್ನೆ ಎಸೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!