Jamboree Special | ಮಕ್ಕಳ ಕಣ್ಣಿಗೆ ಬಿತ್ತು ಅಧಿಕಾರಿಯ ಅಂಗಿ ತುಂಬಾ ಲೋಗೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿಯಲ್ಲಿ ಮೇಳೈಸಿರುವ ‘ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ’ಯಲ್ಲಿ ನಾನಾ ಬಗೆಯ ಕಲಾ ಸಂಭ್ರಮದ ನಡುವೆ ಎಲ್ಲರನ್ನು ತನ್ನತ ಸೆಳೆದರು ಈ ವ್ಯಕ್ತಿ.
ಸ್ಕೌಟ್ ಗೈಡ್ಸ್ ಬಗ್ಗೆ ಅಪಾರ ಪ್ರೇಮ ಹೊಂದಿದ ಅಧಿಕಾರಿಯೊಬ್ಬರು ತಮ್ಮ ಅಂಗಿಗಳ ತುಂಬೆಲ್ಲಾ ಸ್ಕೌಟ್ ವಿಚಾರಗಳ ಲಾಂಛನ ಗಳನ್ನು ಅಳವಡಿಸಿ ಆಕರ್ಷಣೆಗೆ ಪಾತ್ರರಾದರು. ಪ್ರತಿಯೊಬ್ಬರೂ ಇವರ ಸುತ್ತುವರೆದು ಸೆಲ್ಪೀ ಕ್ಲಿಕ್ಕಿಸುವುದರಲ್ಲಿ ಬ್ಯುಸಿಯಾಗಿದ್ದರು. ಮಾತಿಗೂ ಸಿಗದ ಮಟ್ಟಿಗೆ ವಿದ್ಯಾರ್ಥಿಗಳು ಮುತ್ತಿಕೊಂಡು ಇವರ ಜೊತೆ ಸೆಲ್ಪೀ ಕ್ಲಿಕ್ಕಿಸುತ್ತಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!