Jamboree Special | ಎಂತಹ ಶಿಸ್ತು, ಎಂತಹ ವ್ಯವಸ್ಥೆ: ಜಾಂಬೂರಿಗೆ ಬಂದವರ ಬಾಯಲ್ಲಿ ಕೇಳುತ್ತಿದೆ ಈ ಮಾತು!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ದೇಶದ ಮೊಟ್ಟಮೊದಲ, ಅಂತಾರಾಷ್ಟ್ರೀಯ ಮಟ್ಟದ ೨೫ನೇ ಸ್ಕೌಟ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಯಶಸ್ವಿಯಾಗಿ ಮೂರು ದಿನ ಪೂರೈಸಿದೆ.

ಈ ಸಂಭ್ರಮ ಹಲವು ವಿಶೇಷತೆಗೆ ಸಾಕ್ಷಿಯಾಗಿದೆ. ಅದ್ರಲ್ಲೂ ಸಕಲ ಸಿದ್ಧತೆ ನೋಡಿ ಆಗಮಿಸಿದ ಎಲ್ಲರು ಖುಷಿಪಟ್ಟಿದ್ದಾರೆ.
ಯಬ್ಬಾ… ಈ ವ್ಯವಸ್ಥೆ ಬೇರೆಯವರಿಂದ ನಿರೀಕ್ಷೆ ಮಾಡುವುದೂ ಅಸಾಧ್ಯ… ಎಂತಹ ಶಿಸ್ತು, ಎಂತಹ ಅಚ್ಚುಕಟ್ಟು, ಎಂತಹ ವ್ಯವಸ್ಥೆ… ಈ ಮಾತು ಜಾಂಬೂರಿಗೆ ಆಗಮಿಸಿದ ಪ್ರತಿಯೊಬ್ಬರೂ ಹೇಳುತ್ತಿದ್ದರು.

ಎಲ್ಲದರಲ್ಲೂ ಅಚ್ಚುಕಟ್ಟು ವ್ಯವಸ್ಥೆ!. ಎಲ್ಲೂ ಒಂದಿನಿತೂ ಕೊರತೆಗೆ ಅವಕಾಶವಿಲ್ಲ!!. ಶುಚಿತ್ವದಾದಿಯಾಗಿ ಊಟೋಪಚಾರದ ತನಕವೂ ಪ್ರತಿಯೊಂದರಲ್ಲೂ ಶಿಸ್ತು ಅಚ್ಚುಕಟ್ಟುತನ ಎದ್ದು ಕಾಣುತಿತ್ತು.

ಇಡೀ ಆವರಣದ ತುಂಬೆಲ್ಲಾ ಮನಸೂರೆಗೊಳ್ಳುವ ಕಲಾಕೃತಿಗಳು, ಚಿತ್ತಾರಗಳು, ನೆರಳು ಬೆಳಕಿನಾಟಗಳು, ಅಪರೂಪದ ಕಲಾಕೃತಿಗಳು, ಕಲಾ ವೈಭವಗಳು, ವಿದ್ಯುತ್ ದೀಪಾಲಂಕಾರಗಳು ಹೀಗೆ ಪ್ರತಿಯೊಂದೂ ವಿಭಿನ್ನ ಅನುಭವ ನೀಡುತ್ತಿದೆ.

ದೇಶದಲ್ಲೇ ಮೊದಲ ಬಾರಿಗೆ ಅದೂ ಮೂಡುಬಿದಿರೆಯಲ್ಲಿ ನಡೆಯುವ ಸಾಂಸ್ಕೃತಿಕ ಜಾಂಬೂರಿಯನ್ನೊಮ್ಮೆ ನೋಡೋಣ ಎಂದು ಬಂದವರಿಗೆ ನಿರಾಶೆ ಕಾಡುವುದೇ ಇಲ್ಲ. ಅಂತಹ ರೀತಿಯಲ್ಲಿ ಶೃಂಗಾರಗಳಿವೆ, ಪುಷ್ಪಾಲಂಕಾರವಿದೆ. ಕೃಷಿ, ಪುಸ್ತಕ, ವಿಜ್ಞಾನ, ಸಾಂಸ್ಕೃತಿಕ, ಆಹಾರ ಮೇಳಗಳು ಮೇಳೈಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!