ರಾಜಮೌಳಿ ಸಿನಿಮಾ ಭಾರತೀಯ ಚಿತ್ರರಂಗದ ಬಗ್ಗೆ ಯೋಚಿಸುವಂತೆ ಮಾಡಿದೆ: ಜೇಮ್ಸ್ ಕ್ಯಾಮರೂನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಾಲಿವುಡ್ ಸ್ಟಾರ್ ಡೈರೆಕ್ಟರ್ ಹಾಗೂ ವಿಶ್ವದ ಟಾಪ್ ಡೈರೆಕ್ಟರ್ ಗಳಲ್ಲಿ ಒಬ್ಬರಾಗಿರುವ ಜೇಮ್ಸ್ ಕ್ಯಾಮರೂನ್ ಭಾರತದಲ್ಲಿ ತಮ್ಮ ಸಿನಿಮಾಗಳಿಂದ ಅಭಿಮಾನಿಗಳನ್ನು ಗಳಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ಚಿತ್ರ ಅವತಾರ್ ದಿ ವೇ ಆಫ್ ವಾಟರ್ ಭಾರತದಲ್ಲಿ ದೊಡ್ಡ ಯಶಸ್ಸನ್ನು ಗಳಿಸಿ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಇತ್ತೀಚೆಗೆ ತೆಲುಗು ನಿರ್ದೇಶಕ ರಾಜಮೌಳಿ ಅವರು ಹಾಲಿವುಡ್ ಪ್ರಶಸ್ತಿ ಸಮಾರಂಭದಲ್ಲಿ ಜೇಮ್ಸ್ ಕ್ಯಾಮೆರಾನ್ ಅವರನ್ನು ಭೇಟಿಯಾ ಕ್ಯಾಮೆರಾನ್ ಅವರಿಂದ ಅಭಿನಂದನೆಗಳನ್ನು ಸಹ ಪಡೆದಿದ್ದರು.

ಪ್ರೇಮಿಗಳ ದಿನದಂದು ಜೇಮ್ಸ್ ಕ್ಯಾಮರೂನ್ ಅವರ ಟೈಟಾನಿಕ್ ಸಿನಿಮಾ 25 ವರ್ಷಗಳ ನಂತರ ಪುನಃ ಬಿಡುಗಡೆಗೊಳ್ಳಲಿದೆ. ಈ ಸಿನಿಮಾ ವಿಶ್ವಾದ್ಯಂತ ಮರು ಬಿಡುಗಡೆ ಆಗಲಿದೆ. ಈ ಕುರಿತು ಪತ್ರಿಕಾಗೋಷ್ಠಿಯನ್ನು ನಡೆಸಿದ ಅವರು ಭಾರತೀಯ ಚಿತ್ರರಂಗದ ಬಗ್ಗೆಯೂ ರಾಜಮೌಳಿ ಪ್ರಸ್ತಾಪಿಸಿದ್ದಾರೆ.

ʻನನ್ನ ಸಿನಿಮಾ ಟೈಟಾನಿಕ್ ಭಾರತದಲ್ಲಿ ಇಷ್ಟು ಗ್ರ್ಯಾಂಡ್ ರಿಲೀಸ್ ಆಗಲಿಲ್ಲ. ನಾನು 2010 ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಹೋಗಿದ್ದೆ. ಅಂದಿನಿಂದ ನಾನು ಭಾರತೀಯ ಚಲನಚಿತ್ರಗಳು ಮತ್ತು ಭಾರತೀಯ ಚಲನಚಿತ್ರೋದ್ಯಮದ ಬಗ್ಗೆ ಯೋಚಿಸಲು ಪ್ರಾರಂಭಿಸಿದೆ. ಅವತಾರ್ ಸಿನಿಮಾಗಳೊಂದಿಗೆ ಭಾರತದಲ್ಲಿ ನನ್ನ ಸಿನಿಮಾಗಳಿಗೆ ಒಳ್ಳೆಯ ಬೇಡಿಕೆ ಇದೆ ಎಂದು ನಾನು ಅರಿತುಕೊಂಡೆ. ಭಾರತೀಯ ಚಿತ್ರಗಳಿಗೂ ನನ್ನ ಚಿತ್ರಗಳಿಗೂ ವ್ಯತ್ಯಾಸವಿದ್ದರೆ ಅದು ಹಾಡುಗಳು ಮತ್ತು ನೃತ್ಯಗಳು ಮಾತ್ರ. ಇತ್ತೀಚೆಗೆ ರಾಜಮೌಳಿ ಅವರನ್ನು ಭೇಟಿಯಾಗಿದ್ದೆ. ಅವರ RRR ಚಿತ್ರವನ್ನು ನೋಡಿದ ನಂತರ, ಅದರ ಎಲ್ಲಾ ಅಂಶಗಳು ನನ್ನನ್ನು ಯೋಚಿಸುವಂತೆ ಮಾಡಿತು. ಈ ಸಿನಿಮಾ ನನ್ನನ್ನು ಭಾರತೀಯ ಚಿತ್ರರಂಗದ ಬಗ್ಗೆ ದೊಡ್ಡದಾಗಿ ಯೋಚಿಸುವಂತೆ ಮಾಡಿತು. ಈ ಸಿನಿಮಾದಿಂದಾಗಿ ನಾನು ಭಾರತೀಯ ಸಿನಿಮಾಗಳನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದಿದ್ದಾರೆ.

ಜೇಮ್ಸ್ ಕ್ಯಾಮರೂನ್ ಮತ್ತೊಮ್ಮೆ ರಾಜಮೌಳಿ ಮತ್ತು ಆರ್‌ಆರ್‌ಆರ್ ಚಿತ್ರಕ್ಕೆ ಪತ್ರಿಕಾಗೋಷ್ಠಿಯಲ್ಲಿ ಶುಭಾಶಯ ತಿಳಿಸಿದ್ದು, ಅಭಿಮಾನಿಗಳು ಮತ್ತು ಭಾರತೀಯ ಸಿನಿಪ್ರೇಮಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!