ಜಮ್ಮು-ಕಾಶ್ಮೀರ ವಿಲೀನ ವಿಳಂಬವಾದದ್ದು ನೆಹರೂರಿಂದಲೇ- ದಾಖಲೆಗಳ ಮೂಲಕ ಜೈರಾಂ ರಮೇಶರಿಗೆ ತಿರುಗೇಟು ಕೊಟ್ಟರು ಸಚಿವ ಕಿರಣ್ ರಿಜಿಜು

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಅವಕಾಶ ಕೊಟ್ಟು ಹೊಡೆಸಿಕೊಳ್ಳೋದು ಅಂತಾರಲ್ಲ… ಅಂಥದೊಂದು ಸ್ಥಿತಿಗೆ ಕಾರಣವಾಗಿದ್ದು ಕಾಂಗ್ರೆಸ್ಸಿಗ ಜೈರಾಂ ರಮೇಶ ಅವರ ಅಕ್ಟೋಬರ್ 12ರ ಟ್ವೀಟ್. ಅದರಲ್ಲಿ ಅವರ ವಾದವಿದ್ದದ್ದು- ಇತ್ರ ರಾಜ್ಯಗಳ ರೀತಿಯಲ್ಲೇ ಜಮ್ಮು-ಕಾಶ್ಮೀರ ವಿಲೀನವೂ ಆಗದೇ ಕಗ್ಗಂಟಾಗಿದ್ದಕ್ಕೆ ಮಹಾರಾಜ ಹರಿಸಿಂಗ್ ಕಾರಣವೇ ಹೊರತು ಅವತ್ತಿನ ಪ್ರಧಾನಿ ನೆಹರು ಅಲ್ಲ ಅನ್ನೋದು.

ಇದಕ್ಕೆ ತಕ್ಷಣವೇ ಟ್ವೀಟ್ ಮೂಲಕ ಮಾರುತ್ತರ ಬರೆದ ಕೇಂದ್ರದ ಸಚಿವ ಕಿರಿಣ್ ರಿಜಿಜು ಅವರು ಸಂಸತ್ತಿನಲ್ಲಿ ಈ ಹಿಂದೆ ನೆಹರು ಅವರು ಮಾಡಿದ್ದ ಚರ್ಚೆಯ ಮಾತುಗಳ ದಾಖಲೆಯನ್ನೇ ತೋರಿಸಿ ಜೈರಾಂ ರಮೇಶರ ವಾದ ಸುಳ್ಳೆಂದರು.

ರಿಜಿಜು ಅವರು ಒದಗಿಸಿರುವ ಸರ್ಕಾರದ ದಾಖಲೆಗಳ ಪ್ರಕಾರವೇ, ನೆಹರು ಅವರು ಸಂಸತ್ತಿನ ಚರ್ಚೆಯಲ್ಲಿ ಮಾತನಾಡುತ್ತ (ಜುಲೈ 1952)ಹೇಳಿದ್ದ ಮಾತುಗಳ ಸಾರಾಂಶ ಹೀಗಿತ್ತು- “ಜಮ್ಮು-ಕಾಶ್ಮೀರದ ವಿಷಯದಲ್ಲಿ ನನಗೆ ಸಿಕ್ಕ ಸಲಹೆ ಅದೊಂದು ವಿಶೇಷ ಪ್ರಕರಣ ಎಂಬುದಾಗಿತ್ತು. ಹೀಗಾಗಿ ಭಾರತದೊಳಗೆ ಸ್ವಾಧೀನಪಡಿಸಿಕೊಳ್ಳುವಂತೆ ಮಹಾರಾಜರೇ ಹೇಳಿದಾಗಲೂ ನಾವು ಗಡಿಬಿಡಿಗೆ ಬೀಳುವುದು ಬೇಡ ಎಂಬ ನಿರ್ಧಾರಕ್ಕೆ ಬಂದೆವು. ಮಹಾರಾಜರ ಸಮ್ಮತಿ ಹೊರತಾಗಿಯೂ ಅಲ್ಲಿನ ಜನಪ್ರಿಯ ಅಭಿಮತ ಪಡೆಯಬೇಕೆಂದು ನಾವು ತುರ್ತು ನಿರ್ಧಾರಕ್ಕೆ ಹೋಗಲಿಲ್ಲ.”

ತಮ್ಮ ಟ್ವೀಟ್ ಸರಣಿಯಲ್ಲಿ ಇದಕ್ಕೆ ಪೂರಕ ದಾಖಲೆಗಳನ್ನು ನೀಡಿದ್ದಾರೆ ಕಿರಣ್ ರಿಜಿಜು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!