ಜಮ್ಮು-ಕಾಶ್ಮೀರದಲ್ಲಿ ಜನವರಿಯಿಂದ ನಡೆದಿದೆ 45 ಭಯೋತ್ಪಾದಕರ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಶ್ರೀನಗರ: ಈ ವರ್ಷದ ಜನವರಿಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ 45 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಇನ್ಸ್‌ಪೆಕ್ಟರ್ ಜನರಲ್ ಆ ಪೊಲೀಸ್ (ಐಜಿಪಿ) ವಿಜಯ್ ಕುಮಾರ್ ಶನಿವಾರ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಸಿರ್ಹಾಮಾ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಕಮಾಂಡರ್ ಹತ್ಯೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕುಲ್ಗಾಮ್‌ನ ಒಬ್ಬ ಎಲ್‌ಇಟಿ ಭಯೋತ್ಪಾದಕನನ್ನು ಅನಂತನಾಗ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕುಲ್ಗಾಮ್‌ನಲ್ಲಿ ಒಬ್ಬ ಸ್ಥಳೀಯ ಭಯೋತ್ಪಾದಕ ಮತ್ತು ಪಾಕಿಸ್ತಾನಿ ಭಯೋತ್ಪಾದಕನ ಇರುವಿಕೆಯ ಬಗ್ಗೆ ನಮಗೆ ಮಾಹಿತಿ ಇದೆ; ಕಾರ್ಯಾಚರಣೆ ನಡೆಯುತ್ತಿದೆ ಎಂದಿರುವ ಕುಮಾರ್, ಈ ವರ್ಷದ ಜನವರಿಯಿಂದ ಈವರೆಗೆ 45 ಭಯೋತ್ಪಾದಕರು ಹತರಾಗಿದ್ದಾರೆ ಎಂದು ಹೇಳಿದ್ದಾರೆ.

ಎಲ್‌ಇಟಿ ಕಮಾಂಡರ್ ಅನ್ನು ನಿಸಾರ್ ದಾರ್ ಎಂದು ಗುರುತಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮಗಳಿಗಾಗಿ ಅನಂತನಾಗ್‌ನ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಅನ್ನು ಸಹ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಮುಂಜಾನೆ ಎನ್‌ಕೌಂಟರ್ ನಡೆದಿದ್ದು, ಅನಂತನಾಗ್‌ನ ಸಿರ್ಹಾಮಾ ಪ್ರದೇಶದಲ್ಲಿ ಇನ್ನೂ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!