ಜ.19 ಕಲಬುರಗಿಗೆ ಪ್ರಧಾನಿ ಮೋದಿ: ಕಾಯ೯ಕ್ರಮ ಯಶಸ್ವಿಗೆ ನಿಮ೯ಲ್ ಕುಮಾರ್ ಸುರಾಣ ಕರೆ

ಹೊಸದಿಗಂತ ವರದಿ,ಕಲಬುರಗಿ:

ಜ.19ರಂದು ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡನಲ್ಲಿ ತಾಂಡಾದಲ್ಲಿ ವಾಸಿಸುವ 51,900 ಜನರಿಗೆ ಹಕ್ಕು ಪತ್ರ ವಿತರಣೆ ಮಾಡಲು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ.ಅವರ, ಈ ಕಾಯ೯ಕ್ರಮ ಯಶಸ್ವಿಯಾಗಲು ಜಿಲ್ಲಾಡಳಿತದೊಂದಿಗೆ ಜನಪ್ರತಿನಿಧಿಗಳು ಸಮನ್ವಯ ಸಾಧಿಸಿಕೊಂಡು ಹೋಗಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿಮ೯ಲ್ ಕುಮಾರ್ ಸುರಾಣ ತಿಳಿಸಿದರು.

ಶನಿವಾರ ನಗರದ ಚೆಂಬರ್ ಆಫ್ ಕಾಮಸ್೯,ನ ಸಭಾಂಗಣದಲ್ಲಿ ಜನಪ್ರತಿನಿಧಿಗಳೊಂದಿಗೆ ಪೂವ೯ಭಾವಿ ಸಭೆ ನಡೆಸಿ ಮಾತನಾಡಿ, ಹಕ್ಕು ಪತ್ರ ಸ್ವೀಕರಿಸಲಿರುವ ತಾಂಡಾ ನಿವಾಸಿಗಳ ಕರೆದು ತರುವ ವ್ಯವಸ್ಥೆ, ಅವರಿಗೆ ಹಕ್ಕು ಪತ್ರ ವಿತರಿಸುವ ವ್ಯವಸ್ಥೆ, ಸಾವ೯ಜನಿಕರಿಗೆ ಊಟದ ವ್ಯವಸ್ಥೆ, ನೀರಿನ ವ್ಯವಸ್ಥೆ, ಪಾಕೀ೯ಂಗ್ ವ್ಯವಸ್ಥೆ ಸೇರಿದಂತೆ ಎಲ್ಲವೂ ಅಚ್ಚುಕಟ್ಟಾಗಿ ನಿವ೯ಹಿಸಬೇಕು. ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿಕೊಂಡು ಎಲ್ಲರೂ ಕೂಡಿ ಕಾಯ೯ಕ್ರಮ ಯಶಸ್ವಿಯಾಗಲು ಸಹಕರಿಸಬೇಕು ಎಂದು ಕರೆ ನೀಡಿದರು.

ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಮಾತನಾಡಿ, ಪ್ರಧಾನಿ ಅವರ ಕಾಯ೯ಕ್ರಮಕ್ಕೆ ಸರಿಸುಮಾರು 3 ರಿಂದ 5 ಲಕ್ಷ ಜನ ಬರುವ ನಿರೀಕ್ಷೆ ಹೊಂದಲಾಗಿದೆ. ಇದಕ್ಕಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.60 ವಷ೯ಗಳಲ್ಲಿ ಆಗದ ಐತಿಹಾಸಿಕ ಕೆಲಸ, ನರೇಂದ್ರ ಮೋದಿಯವರಿಂದ ಆಗುತ್ತಿದ್ದು,ಪ್ರಧಾನಿ ಸೇರಿದಂತೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ತಾಂಡಾಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ‌.ರಾಜೀವ್ ಮತ್ತು ಕೇಂದ್ರ ಸರ್ಕಾರದ ಹಲವು ಸಚಿವರು ಭಾಗಿಯಾಗುವ ಸಂಭವನೆ ಇದೆ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಕಾಯ೯ಕ್ರಮದ ಯಶಸ್ವಿ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್, ಅವಿನಾಶ್ ಜಾಧವ್,ರಘುನಾಥ್ ರಾವ ಮಲ್ಕಾಪುರೆ, ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್, ಶರಣು ಸಲಗರ್,ಈಶ್ವರಸಿಂಗ್ ಠಾಕೂರ್, ವಿಭಾಗದ ಸಂಘಟನಾ ಕಾಯ೯ದಶಿ೯ ಅರುಣ್ ಬಿನ್ನಾಡಿ,ಉಮೇಶ್ ಪಾಟೀಲ್, ಮಹಾದೇವ ಬೆಳಮಗಿ, ಭಾಗಿರಥಿ ಗುನ್ನಾಪುರ,ಸುಧಾ ಹಾಲಕಾಯಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!