spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸ್ವರ್ಣ ಜಯಂತಿಯ ಹೊಸ್ತಿಲಲ್ಲಿ ಜನಸೇವಾ ವಿದ್ಯಾ ಕೇಂದ್ರ : ಡಿ. 26ರಂದು ಪೂರ್ಣ ಮಂಡಲೋತ್ಸವಕ್ಕೆ ಚಾಲನೆ 

- Advertisement -Nitte
ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರೇರಣೆಯಿಂದ ಜನಸೇವಾ ಟ್ರಸ್ಟ್ ಹೆಸರಿನಲ್ಲಿ 1971ರಲ್ಲಿ 13 ವಿದ್ಯಾರ್ಥಿಗಳಿಂದ ಆರಂಭವಾದ ಜನಸೇವಾ ವಿದ್ಯಾಕೇಂದ್ರ ಪೂರ್ಣಮಂಡಲೋತ್ಸವ (ಸ್ವರ್ಣ ಜಯಂತಿ) ಆಚರಿಸಿಕೊಳ್ಳಲು ಸಜ್ಜಾಗಿದೆ.
ಡಿ. 26ರಂದು ಬೆಳಗ್ಗೆ 11ಗಂಟೆಗೆ ರಾಜ್ಯಪಾಲ ತಾವರ್ ಚಂದ್ರ ಗೆಹ್ಲೋಟ್ ಪೂರ್ಣ ಮಂಡಲೋತ್ಸವ ಉದ್ಘಾಟಿಸಲಿದ್ದಾರೆ. ಮೈಸೂರು ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷ ಶ್ರೀಮುಕ್ತಾನಂದಜಿ, ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮುಖ್ಯ ಅತಿಥಿಗಳಾಗಿದ್ದಾರೆ. ಸಂಜೆ ಶಾಲಾ ವಾರ್ಷಿಕೋತ್ಸವ ಜರಗಲಿದೆ ಎಂದು ಟ್ರಸ್ಟ್‌ನ ಕಾರ್ಯನಿರ್ವಾಹಕ ವಿಶ್ವಸ್ಥ ನಾ. ತಿಪ್ಪೆಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ದೇಶಭಕ್ತಿ, ಸಂಸ್ಕಾರ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವುದು ಸಂಸ್ಥೆಯ ಉದ್ದೇಶ. ಯೋಗ, ದೇಶಿಯ ಆಟಗಳು, ಗೋಸೇವೆ, ಕೃಷಿ, ಗ್ರಾಮ ಸಂಪರ್ಕ ಸಹಿತ ಬದುಕಿನ ಪಾಠವನ್ನು ರಾಜ್ಯದ ವಿವಿಧೆಡೆಯಿಂದ ಬಂದಿರುವ 650ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.
ಅನೇಕ ವರ್ಷಗಳಿಂದ ಶಿಕ್ಷಣ ಸಂಸ್ಥೆ ಸುತ್ತಮುತ್ತಲಿರುವ ಗ್ರಾಮಗಳ ಮಕ್ಕಳಿಗೆ ಆಟದ ಜೊತೆಗೆ ಪಾಠದ ಸಂಸ್ಕಾರವನ್ನು ನೀಡುತ್ತಿದ್ದೇವೆ. ಉಚಿತ ಹೊಲಿಗೆ ತರಬೇತಿ ಕೇಂದ್ರಗಳ ಮೂಲಕ ಮಹಿಳೆಯರ ಬದುಕನ್ನು ಸ್ವಾವಲಂಬಿಯಾಗಿಸಲು ಪ್ರಯತ್ನಿಸಲಾಗಿದೆ. ಗ್ರಾಮ ವಿಕಾಸ ಯೋಜನೆಯಡಿಯಲ್ಲಿ 3 ಯೋಗ ಕೇಂದ್ರಗಳು, 4 ಭಜನಾ ಕೇಂದ್ರಗಳು, 10 ಕಲಿಕಾ ಕೇಂದ್ರಗಳು, 10 ಬಾಲ ಗೋಕುಲ ಕೇಂದ್ರಗಳನ್ನು ಸ್ಥಾಪಿಸಿ 94 ಗ್ರಾಮಗಳಲ್ಲಿ ನಿರಂತರ ಸಂಪರ್ಕದಲ್ಲಿ ಇರಿಸಕೊಂಡಿದ್ದೇವೆ ಎಂದು ವಿವರಿಸಿದರು.
ಪೂರ್ಣ ಮಂಡಲೋತ್ಸವದ ಪ್ರಯುಕ್ತ ವರ್ಷ ಪೂರ್ತಿ 50 ಗ್ರಾಮಗಳಲ್ಲಿ ವಿದ್ಯಾರ್ಥಿ ಸಮಾವೇಶ, ಗುರುಕುಲದ ರಾಷ್ಟ್ರೀಯ ಸಮ್ಮೇಳನ, ಯುವ ಸಮಾವೇಶ, ಪ್ರಕೃತಿ ಚಿಕಿತ್ಸಾ ಕೇಂದ್ರಗಳು, ಗೋ ಶಾಲೆಗಳ ಸ್ಥಾಪನೆ, ಕನ್ನಡ ಮಾಧ್ಯಮದ ಅಧಿಶೀಲ ಶಿಕ್ಷಣ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ನಿಶ್ಚಯಿಸಲಾಗಿದೆ. ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಯದುರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನಾ. ತಿಪ್ಪೇಸ್ವಾಮಿ ತಿಳಿಸಿದರು.
ಪೂರ್ಣ ಮಂಡಲೋತ್ಸವ ಸ್ವಾಗತ ಸಮಿತಿ ಗೌರವಾಧ್ಯಕ್ಷ ಮೈಸೂರು ಸಂಸ್ಥಾನದ ಯದುರ ಕೃಷ್ಣದತ್ತ ಚಾಮರಾಜ ಒಡೆಯರ್, ಅರಮನೆ ಹಾಗೂ ಜನಸೇವಾ ವಿಶ್ವಸ್ತ ಮಂಡಳಿಯ ಚಿಂತನೆಗಳು ಸಂಪೂರ್ಣವಾಗಿ ಹೋಲಿಕೆಯಾಗುತ್ತವೆ. ಹೀಗಾಗಿ ನಾನು ಕೂಡ ಪೂರ್ಣ ಮಂಡಲೋತ್ಸವದ ಭಾಗವಾಗಿದ್ದೇನೆ, ಇದು ನನ್ನ ಸೌಭಾಗ್ಯ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವೇದ ವಿಜ್ಞಾನ ಗುರುಕುಲದ ಮುಖ್ಯಸ್ಥ ಕೋಟೆಮನೆ ರಾಮಚಂದ್ರ ಭಟ್, ಜನಸೇವಾ ಟ್ರಸ್ಟ್ ಗೌರವ ಕಾರ್ಯದರ್ಶಿ ನಿರ್ಮಲ್‌ಕುಮಾರ್ ಉಪಸ್ಥಿತರಿದ್ದರು.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss