ಅಂಕೋಲಾದಲ್ಲಿ ಭಾವೈಕ್ಯತೆಗೆ ಸಾಕ್ಷಿಯಾದ ಜನ್ಮಾಷ್ಟಮಿ: ಮುದ್ದು ಮಕ್ಕಳ ಸಂಭ್ರಮಕ್ಕೆ ಮನಸೋತ ಅಂಕೋಲಾ

ಹೊಸದಿಗಂತ ವರದಿ ಅಂಕೋಲಾ: ಇಲ್ಲಿಯ ಶಾಂತಿನಿಕೇತನ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ನಡೆದ ಮುದ್ದು ಕೃಷ್ಣ – ಮುದ್ದು ರಾಧೆ ಸ್ಪರ್ಧೆಯಲ್ಲಿ ಮುಸ್ಲಿಂ ಮಹಿಳೆಯರೂ ಸಹ ತಮ್ಮ ಮಗುವಿಗೆ ಮುದ್ದು ಕೃಷ್ಣನ ವೇಷ ಧರಿಸಿ ಗಮನ ಸೆಳೆದರು. ಈ ಸ್ಪರ್ಧೆಯಲ್ಲಿ 60 ಕ್ಕಿಂತಲೂ ಹೆಚ್ಚು ಪುಟಾಣಿಗಳು ಯಾವುದೇ ಧರ್ಮ, ಮತ ಭೇದವಿಲ್ಲದೆ ಕೃಷ್ಣ ವೇಷ ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.