ರಷ್ಯಾದಿಂದ ತೈಲ ಖರೀದಿಯನ್ನು ಪುನಃ ಪ್ರಾರಂಭಿಸಿದೆ ಜಪಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕವಾಗಿ ತೈಲ ಬಿಕ್ಕಟ್ಟು ತಲೆದೂರಿದ್ದು ಉಕ್ರೇನ್‌ ರಷ್ಯಾ ಯುದ್ದದ ಹಿನ್ನೆಲೆಯಲ್ಲಿ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿದ್ದ ದೇಶಗಳೆಲ್ಲ ಈಗ ಪುನಃ ರಷ್ಯಾದಿಂದ ತೈಲ ಖರೀದಿಸೋಕೆ ಮುಂದಾಗಿವೆ. ಜೂನ್‌ ತಿಂಗಳಲ್ಲಿ ರಷ್ಯಾದಿಂದ ಒಂದೇ ಒಂದು ಬ್ಯಾರಲ್‌ ತೈಲವನ್ನೂ ರಷ್ಯಾದಿಂದ ಖರೀದಿ ಮಾಡದ ಜಪಾನ್‌ ಇದೀಗ ಮತ್ತೆ ಪುನಃ ರಷ್ಯಾದಿಂದ ತೈಲ ತರಿಸಿಕೊಳ್ಳೋಕೆ ಶುರುವಿಟ್ಟಿದೆ.

ಉಕ್ರೇನ್-ಸಂಬಂಧಿತ ನಿರ್ಬಂಧಗಳ ಹಿನ್ನೆಲೆಯಲ್ಲಿ ಜಪಾನಿನ ಸ್ಥಳೀಯ ಸಂಸ್ಕರಣಾದಾರರು ರಷ್ಯಾದ ತೈಲವನ್ನು ಹೊರಹಾಕಲು ಮುಂದಾಗಿದ್ದವು. ಈ ಹಿನ್ನೆಲೆಯಲ್ಲಿ ರಷ್ಯಾದಿಂದ ಜಪಾನ್‌ಗೆ ಆಮದಾಗುತ್ತಿದ್ದ ತೈಲ ಪ್ರಮಾಣದಲ್ಲಿ ಕುಸಿತವುಂಟಾಗಿ ಜೂನ್‌ ಸಮಯದಲ್ಲಿ ಅದು ಶೂನ್ಯಕ್ಕೆ ಕುಸಿದಿತ್ತು. ಆದರೆ ಜುಲೈ ತಿಂಗಳಲ್ಲಿ ಮತ್ತೆ ಖರೀದಿ ಪ್ರಾರಂಬವಾಗಿದ್ದು ಎಷ್ಟು ಪ್ರಮಾನದಲ್ಲಿ ತರಿಸಿಕೊಂಡಿದೆ ಎಂಬುದನ್ನು ಜಪಾನ್‌ ಬಹಿರಂಗ ಪಡಿಸಿಲ್ಲ. ಆದರೆ ಕಳೆದ ವರ್ಷದ ಜುಲೈಗೆ ಹೋಲಿಸಿದರೆ 65.4% ದಷ್ಟು ಕಡಿಮೆಯಾಗಿದೆ ಎಂದು ಲಭ್ಯವಿರುವ ಮಾಹಿತಿ ಹೇಳಿದೆ. ಇನ್ನು ಜುಲೈ 2021 ಕ್ಕೆ ಹೋಲಿಸಿದರೆ ರಷ್ಯಾದಿಂದ ದ್ರವೀಕೃತ ನೈಸರ್ಗಿಕ ಅನಿಲ (LNG) ಆಮದುಗಳ ಪ್ರಮಾಣವು 26.1% ರಷ್ಟು ಕಡಿಮೆಯಾಗಿದೆ ಮತ್ತು ಕಲ್ಲಿದ್ದಲು ಆಮದು 40.1% ರಷ್ಟು ಕಡಿಮೆಯಾಗಿದೆ ಎಂದು ಜಪಾನ್ ನ ವಿತ್ತ ಸಚಿವಾಲಯ ಹೇಳಿದೆ.

ತೈಲ ಖರೀದಿಯ ಪ್ರಮಾನದಲ್ಲಿ ಕುಸಿದಿದೆಯಾದರೂ ಜಾಗತಿಕವಾಗಿ ಏರುತ್ತಿರು ಸರಕುಗಳ ಬೆಲೆಗಳ ಪರಿಣಾಮದಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಜಪಾನ್‌ಗೆ ರಷ್ಯಾದ ಇಂಧನ ರಫ್ತಿನ ಮೌಲ್ಯವು 45.1% ರಷ್ಟು ಹೆಚ್ಚಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!