ಯುವತಿಯನ್ನು ಕೊಂದು ಅತ್ಯಾಚಾರ ಎಸಗಿ ಭಕ್ಷಿಸಿದ್ದ ಜಪಾನಿನ ನರಭಕ್ಷಕ ಸಗಾವಾ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಡಚ್ ವಿದ್ಯಾರ್ಥಿಯನ್ನು ಕೊಂದು, ಆಕೆಯ ಮೇಲೆ ಅತ್ಯಾಚಾರ ಎಸಗಿ, ದೇಹದ ಭಾಗಗಳನ್ನು ಕತ್ತರಿಸಿ ತಿಂದಿದ್ದ ತಿಂದಿದ್ದ ಜಪಾನಿನ ನರಭಕ್ಷಕ, ವಿಕೃತಕಾಮಿ ಇಸ್ಸೆ ಸಗಾವಾ ತನ್ನ 73 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾನೆ.
ಪಾತಕಿಗಳ ಲೋಕದಲ್ಲಿ ಸಗಾವನಿಗೆ ಬಹಳಷ್ಟು ಕುಖ್ಯಾತಿ ಇದೆ. ಆತ ʼಕೋಬ್ ಕ್ಯಾನಿಬಾಲ್ʼ (ನರಭಕ್ಷಕ) ಎಂದು ಕರೆಸಿಕೊಳ್ಳುತ್ತಿದ್ದ. ಚಿಕ್ಕವಯಸ್ಸಿನಿಂದಲೇ ನರಭಕ್ಷಣೆಯ ಕುರಿತು ಸೆಳೆತ ಹೊಂದಿದ್ದ ಸಗಾವ ತನ್ನ ಮನಸ್ಸಿನಲ್ಲಿ ಕೊರೆಯುತ್ತಿದ್ದ ಆಸೆಯನ್ನು ಕಾರ್ಯರೂಪಕ್ಕೆ ತಂದಿದ್ದು 1981 ರಲ್ಲಿ. ಆಗ 28 ವರ್ಷದವನಾಗಿದ್ದ ಸಾಗವಾ ಪ್ಯಾರಿಸ್‌ನ  ಪ್ರತಿಷ್ಠಿತ ಸರ್ಬೋನೆ ಯೂನಿವರ್ಸಿಟಿಯಲ್ಲಿ ಪಾಶ್ಚಾತ್ಯ ಭಾಷೆಗಳ ಅಧ್ಯಯನ ಮಾಡುತ್ತಿದ್ದಾಗ ಪರಿಚಯವಾಗಿದ್ದ ಡಚ್ ವಿದ್ಯಾರ್ಥಿ ರೆನೀ ಹಾರ್ಟೆವೆಲ್ಟ್ ಅವರನ್ನು ತನ್ನ ಅಪಾರ್ಟ್‌ ಮೆಂಟ್‌ ಗೆ ಆಹ್ವಾನಿಸಿದ್ದ.
ಆ ಬಳಿಕ ನಡೆದಿದ್ದು ಮನುಷ್ಯರು ಕಲ್ಪಿಸಿಕೊಳ್ಳಲೂ ಅಸಹ್ಯಪಡುವ ಭೀಕರ ಘಟನಾವಳಿಗಳು. ರೆನೀ ಹಾರ್ಟೆವೆಲ್ಟ್‌ಳ ಕುತ್ತಿಗೆಗೆ ಗುಂಡು ಹಾರಿಸಿ ಕೊಂದಿದ್ದ ಸೆಗಾವಾ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ. ಆ ಬಳಿಕ ಆಕೆಯ ದೇಹದ ಭಾಗಗಳನ್ನು ಕತ್ತರಿಸಿ ಹಲವಾರು ದಿನಗಳ ಕಾಲ ಅವಳ ದೇಹದ ಭಾಗಗಳನ್ನು ಸೇವಿಸಿದ್ದ.
ಆ ಬಳಿಕ ಆಕೆಯ ದೇಹದ ಅಳಿದುಳಿದ ಭಾಗಗಳನ್ನು ಪ್ಯಾರೀಸ್‌ ನ ಬೋಯಿಸ್ ಡಿ ಬೌಲೋಗ್ನೆ ಉದ್ಯಾನವನದಲ್ಲಿ ವಿಲೇವಾರಿ ಮಾಡಲು ಪ್ರಯತ್ನಿಸುತ್ತಿರುವಾಗ ಪೊಲೀಸರಿಗೆ ಸಿಕ್ಕಿಬಿದಿದ್ದಿದ್ದ. ಈ ವೇಳೆ ಆತನ ನರಭಕ್ಷಣೆಯ ಸುದ್ದಿ ಜಗತ್ತಿನಲ್ಲೆಲ್ಲ ದೊಡ್ಡ ಸುದ್ದಿಯಾಗಿತ್ತು. ಆದರೆ ತೀರ ಅಚ್ಚರಿಯ ವಿಚಾರವೆಂದರೆ  ಆತನಿಗೆ ಈ ಕೃತ್ಯಕ್ಕೆ ಒಂದು ಚೂರೂ ಶಿಕ್ಷೆಯಾಗಲಿಲ್ಲ. ಆಗರ್ಭ ಶ್ರೀಮಂತನಾಗಿದ್ದ ಸೆಗಾವ ತಂದೆ ಪೊಲೀಸರಿಗೆ ದಾರಾಳ ದುಡ್ಡು ಸುರಿದು ಸೆಗಾವನನ್ನು ವಿಚಾರಣೆಯಿಲ್ಲದೆ ಮರಳಿ ಜಪಾನಿಗೆ ಕರೆತಂದಿದ್ದ.
ಆತ ವಿಚಾರಣೆ ಎದುರಿಸಲಾಗದಷ್ಟು ಮಾನಸಿಕ ರೋಗಿ ಎಂದು ಶರಾ ಬರೆದಿದ್ದ ಫ್ರೆಂಚ್ ವೈದ್ಯಕೀಯ ತಜ್ಞರು ಆತ ವಿಚಾರಣೆಗೆ ಅನರ್ಹರೆಂದು ಪರಿಗಣಿಸಿದರು.1984 ರಲ್ಲಿ ಆತನನ್ನು ಜಪಾನ್‌ಗೆ ಗಡೀಪಾರು ಮಾಡಲಾಗಿತ್ತು.  ಈತನ ಅಪರಾಧ ಕೃತ್ಯದ ಫೈಲ್‌ಗಳನ್ನು ಸಹ ಫ್ರೆಂಚ್‌ ಅಧಿಕಾರಿಗಳು ಜಪಾನ್‌ಗೆ ಕಳುಹಿಸುವುದಿಲ್ಲ. ಆದ್ದರಿಂದ ಸೆಗಾವ ಜಪಾನ್‌ನಲ್ಲಿ ಸರ್ವ ಸ್ವತಂತ್ರವಾಗಿರಲು ಓಡಾಡಿಕೊಂಡಿದ್ದ.
ಆದರೆ ಸಾಗಾವಾ ತನ್ನ ಅಪರಾಧವನ್ನು ರಹಸ್ಯವಾಗಿಡಲಿಲ್ಲ ಮತ್ತು ತನ್ನ ಕುಖ್ಯಾತಿಯನ್ನು ಬಂಡವಾಳ ಮಾಡಿಕೊಂಡು 20 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ಅಪಾರ ಪ್ರಖ್ಯಾತಿ ಗಳಸಿದ. ಅದರಲ್ಲೂ “ಇನ್ ದಿ ಫಾಗ್” ಎಂಬ ಕಾದಂಬರಿ ಅವನ ನರಭಕ್ಷಣೆ ಕತೆಯನ್ನೇ ಹೊಂದಿತ್ತು!. ಅದರಲ್ಲಿ ಆತ ತನ್ನ ಕೊಲೆಯ ಬಗ್ಗೆ ವಿವರವಾಗಿ ನೆನಪಿಸಿಕೊಂಡಿದ್ದ.
1982 ರಲ್ಲಿ ದೇಶದ ಅತ್ಯಂತ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಯನ್ನು ಗೆದ್ದ ಜಪಾನಿನ ಕಾದಂಬರಿಕಾರ ಜೂರೋ ಕಾರಾ ಅವರ “ಲೆಟರ್ ಫ್ರಮ್ ಸಾಗವಾ-ಕುನ್” ಕಾದಂಬರಿಯ ವಿಷಯವೂ ಈ ಕೊಲೆಯಾಗಿದೆ.
ಆದರೆ ಸೆಗಾವ ತನ್ನ ಕೃತ್ಯದ ಬಗ್ಗೆ ಯಾವತ್ತೂ ಪಶ್ಚಾತ್ತಾಪ ಪ್ರದರ್ಶಿಸಲಿಲ್ಲ, 2013 ರ ಸಂದರ್ಶನದಲ್ಲಿ ಸಹ ತನ್ನ ನರಭಕ್ಷಣೆಯ ಆಕರ್ಷಣೆಯ ಬಗ್ಗೆ ಹೇಳಿದ್ದ. ಪಾರ್ಶ್ವವಾಯು ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ತನ್ನ ಕೊನೆಯ ವರ್ಷಗಳನ್ನು ಗಾಲಿಕುರ್ಚಿಯಲ್ಲಿ ಕಳೆದ ಸಗಾವಾ, ಸಹೋದರನೊಂದಿಗೆ ವಾಸಿಸುತ್ತಿದ್ದ. ಇದೀಗ ತನ್ನ 73ನೇ ವಯಸ್ಸಿನಲ್ಲಿ ನ್ಯುಮೋನಿಯಾದಿಂದ ಮೃತಪಟ್ಟಿದ್ದಾನೆ, ಕುಟುಂಬದ ಸದಸ್ಯರು ಆತನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!