ನಾವಿದ್ದೇವೆ ಜೊತೆಗೆ: ಜಪಾನ್ ಜನತೆ, ಶಿಂಜೋ ಅಬೆ ಕುಟುಂಬಕ್ಕೆ ಧೈರ್ಯ ತುಂಬಿದ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲಿನ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ  ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, “ನನ್ನ ಆತ್ಮೀಯ ಸ್ನೇಹಿತ ಶಿಂಜೋ ಅಬೆ ಮೇಲಿನ ದಾಳಿಯಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ನಾವೆಲ್ಲರೂ ಅವರ ಕುಟುಂಬದೊಂದಿಗೆ, ಜಪಾನ್ ಜನರೊಂದಿಗೆ ಇದ್ದೇವೆ” ಎಂದು ಬರೆದುಕೊಂಡಿದ್ದಾರೆ.

ಶಿಂಜೋ ಅಬೆ ಅವರು ನರೇಂದ್ರ ಮೋದಿ ಅವರ ಅತ್ಯಂತ ವಿಶ್ವಾಸಾರ್ಹ ಸ್ನೇಹಿತರಲ್ಲಿ ಒಬ್ಬರು ಎಂದು ಈ ಹಿಂದೆ ಹಲವು ಬಾರಿ ಘೋಷಿಸಿದ್ದು ಗೊತ್ತೇ ಇದೆ. ಮೇಲಾಗಿ ಪ್ರಧಾನಿ ಮೋದಿ ಅವರು ಗುಜರಾತ್ ಸಿಎಂ ಆಗಿದ್ದ ಅವಧಿಯಲ್ಲಿ ಹಲವು ಬಾರಿ ಜಪಾನ್ ಗೆ ಹೋಗಿದ್ದರು. ಮೋದಿ ಪ್ರಧಾನಿಯಾದ ನಂತರವೂ ಅಬೆ ಅವರು ಭಾರತದೊಂದಿಗೆ ನಿಕಟ ಸಂಬಂಧವನ್ನು ಇಟ್ಟುಕೊಂಡಿದ್ದರು. ನಮ್ಮ ಈ ಸಂಬಂಧ ಶಾಶ್ವತವಾಗಿರುತ್ತದೆ ಎಂದು ಇಬ್ಬರು ನಾಯಕರೂ ಬಹಿರಂಗಪಡಿಸುತ್ತಿದ್ದರು.

ಶಿಂಜೋ ಅಬೆ ಅವರ ಆರೋಗ್ಯ ಸ್ಥಿತಿ ಗಂಭೀರ
ಶಿಂಜೋ ಅಬೆ ಅವರ ಮೇಲೆ ನಾರಾದಲ್ಲಿ  ಬೆಳಿಗ್ಗೆ 8:30 ಕ್ಕೆ ಗುಂಡು ಹಾರಿಸಲಾಯಿತು. ಮಾಜಿ ಪ್ರಧಾನಿಯವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಜಪಾನ್‌ನ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಹಿರೊಕಾಜು ಮಾಟ್ಸುನೊ ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!