ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಂದ್ರನ ಮೇಲೆ ತನ್ನದೂ ಆಧಿಪತ್ಯ ಸಾಧಿಸುವ ಜಪಾನ್‌ನ ಮಹತ್ವಾಕಾಂಕ್ಷಿ ಯೋಜನೆ ವಿಫಲವಾಗಿದೆ.
ಐಸ್ಪೇಸ್‌ನ ಬಾಹ್ಯಾಕಾಶ ನೌಕೆ ಶುಕ್ರವಾರ ತನ್ನ ನಿರೀಕ್ಷಿತ ಲ್ಯಾಂಡಿಂಗ್ ಪ್ರಯತ್ನದ ವೇಳೆ ಅಪಘಾತಕ್ಕೀಡಾಗಿದೆ. ಲ್ಯಾಂಡಿಂಗ್ ಸಮಯ ಕಳೆದ ಕೆಲವು ಗಂಟೆಗಳ ಬಳಿಕ ಐಸ್ಪೇಸ್ ಮಿಷನ್ ಕಳೆದುಹೋಗಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಇದರೊಂದಿಗೆ ಚಂದ್ರನ ಉತ್ತರ ಭಾಗದಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸುವ ಮೂಲಕ ಮೊದಲ ಖಾಸಗಿ ಜಪಾನೀಸ್ ಕಂಪನಿ ಎಂಬ ಕನಸು ಛಿದ್ರವಾಗಿದೆ.
೨೦೨೫ರ ಜನವರಿಯಲ್ಲಿ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ ಇದು ಉಡ್ಡಯನವಾಗಿತ್ತು. ಇಂಧನ ದಕ್ಷತೆ, ಕಡಿಮೆ ಶಕ್ತಿ ವರ್ಗಾವಣೆ ಪಥವನ್ನು ಬಳಸಿಕೊಂಡು ಚಂದ್ರನಿಗೆ ಪ್ರಯಾಣಿಸಲು ಇದು ಸುಮಾರು ಐದು ತಿಂಗಳ ಕಾಲಾವಕಾಶ ಪಡೆದುಕೊಂಡಿತ್ತು. ಮೇ ತಿಂಗಳಲ್ಲಿ ಚಂದ್ರನ ಕಕ್ಷೆಯನ್ನು ಪ್ರವೇಶಿಸಿದ ಈ ಬಾಹ್ಯಾಕಾಶ ನೌಕೆ, ಚಂದ್ರನ ಉತ್ತರ ಗೋಳಾರ್ಧದಲ್ಲಿ ಇಳಿಯುವ ಗುರಿಯನ್ನು ಹೊಂದಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ