ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಜರ್ಸಿ ತೊಟ್ಟು ಪದೇ ಪದೇ ಮೈದಾನಕ್ಕೆ ಪ್ರವೇಶಿಸಿಸುತ್ತಿದ್ದ ಇಂಗ್ಲೆಂಡ್ ಯೂಟ್ಯೂಬರ್ ಡೇನಿಯಲ್ ಜಾರ್ವಿಸ್ ಅಲಿಯಾಸ್ ಜಾರ್ವೋ69 ಅವರನ್ನು ಭದ್ರತಾ ನಿಯಮವನ್ನು ಉಲ್ಲಂಘಿಸಿದ ಆರೋಪದ ಮೇಲೆ ಕ್ರೀಡಾಂಗಣದಿಂದ ಜೀವನ ಪರ್ಯಂತ ನಿಷೇಧವೇರಲಾಗಿದೆ ಎಂದು ಶನಿವಾರ ಇಂಗ್ಲೀಷ್ ಕೌಂಟಿ ಕ್ಲಬ್ ಯಾರ್ಕ್ಷೈರ್ ಖಚಿತಪಡಿಸಿದೆ.
69 ನಂಬರ್ ಭಾರತೀಯ ಜರ್ಸಿಯನ್ನು ತೊಟ್ಟು ಲಾರ್ಡ್ಸ್ ಟೆಸ್ಟ್ ವೇಳೆ ಮೈದಾನಕ್ಕೆ ಆಗಮಿಸಿದ್ದ ಜರ್ವೋ ಎಲ್ಲರ ಹುಬ್ಬೇರುವಂತೆ ಮಾಡಿದ್ದ. ನಂತರ 3ನೇ ಟೆಸ್ಟ್ ವೇಳೆ ಬ್ಯಾಟ್ ಹಿಡಿದು ಮೈದಾನಕ್ಕೆ ಆಗಮಿಸಿದ್ದರಿಂದ ಯಾರ್ಕ್ಷೈರ್ ಕ್ರಿಕೆಟ್ ಕ್ಲಬ್ ಭದ್ರತಾ ಉಲ್ಲಂಘನೆಯ ಪ್ರಕರಣ ದಾಖಲಿಸಿದ್ದು, ಆತನಗೆ ಲೀಡ್ಸ್ ಕ್ರೀಡಾಂಗಣದಿಂದ ಅಜೀವ ನಿಷೇಧ ಏರಿದೆ ಮತ್ತು ದೊಡ್ಡ ಪ್ರಮಾಣದ ದಂಡವನ್ನು ವಿಧಿಸಿದೆ.
‘ ಜರ್ವೋ ಹೆಡಿಂಗ್ಲೆ ಪ್ರವೇಶಿಸುವುದನ್ನು ಜೀವನಪರ್ಯಂತೆ ನಿಷೇಧಿಸಲಾಗಿದೆ. ಅಲ್ಲದೆ ಅವರ ವಿರುದ್ಧ ನಾವು ದಂಡವನ್ನೂ ವಿಧಿಸುತ್ತೇವೆ’ ಎಂದು ಯಾರ್ಕ್ಷೈರ್ ಸಿಸಿಸಿ ವಕ್ತಾರ ಪಿಟಿಐಗೆ ಮಾಹಿತಿ ನೀಡಿದ್ದಾರೆ.
Jarvo is at the crease #engvsindia pic.twitter.com/XlATed4vGg
— JJK (@72jjk) August 27, 2021