ಬೈಕ್‌ನಲ್ಲಿದ್ದ ಜವರಾಯ, ಖ್ಯಾತ ಬೈಕರ್ ದುರ್ಮರಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫೇಮಸ್ ಯೂಟ್ಯೂಬರ್ ಹಾಗೂ ವೃತ್ತಿಪರ ಬೈಕರ್ ಅಗಸ್ತ್ಯ ಚೌಹಾಣ್ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಉತ್ತರಾಖಂಡದ ಡೆಹ್ರಾಡೂನ್ ನಿವಾಸಿಯಾದ ಚೌಹಾಣ್ ಬೈಕ್ ಸವಾರನಾಗಿದ್ದ, ಪ್ರೋ ರೈಡರ್ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಹೊಂದಿದ್ದು, 1.2 ಮಿಲಿಯನ್ ಫಾಲೋವರ‍್ಸ್ ಹೊಂದಿದ್ದಾರೆ.

ಅಪಘಾತಕ್ಕೆ 16  ಗಂಟೆ ಮುನ್ನ ವಿಡಿಯೋವೊಂದನ್ನು ಚೌಹಾಣ್ ಅಪ್‌ಲೋಡ್ ಮಾಡಿದ್ದಾರೆ. ಗಂಟೆಗೆ 300 ಕಿ.ಮೀ ಸ್ಪೀಡ್‌ನಲ್ಲಿ ತೆರಳುತ್ತಿದ್ದ ವೇಳೆ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಅಗಸ್ತ್ಯ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಸ್ಥಳದಲ್ಲೇ ಪ್ರಾಣ ಹೋಗಿದೆ. ತಮ್ಮ ಪ್ರತಿ ವಿಡಿಯೋದಲ್ಲಿಯೂ ಚೇಗದ ಚಾಲನೆ ಅಪಾಯಕಾರಿ ಎನ್ನುವ ಸಂದೇಶವನ್ನು ಅಗಸ್ತ್ಯ ನೀಡುತ್ತಿದ್ದರು. ಆದರೆ ಅದೇ ವೇಗಕ್ಕೆ ಇಂದು ಅವರೇ ಬಲಿಯಾಗಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!