ರಿಲೀಸ್ ಮುನ್ನವೇ ಜವಾನ ಸಿನಿಮಾ ದೃಶ್ಯ ಲೀಕ್: ಹೈಕೋರ್ಟ್ ಮೆಟ್ಟಿಲೇರಿದ ಶಾರುಖ್ ಖಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ನಟನೆಯ ‘ಜವಾನ’ (Jawan) ಸಿನಿಮಾ ಜೂನ್ ನಲ್ಲಿ ರಿಲೀಸ್ ಆಗಲಿದೆ. ಅದಕ್ಕೂ ಮುನ್ನವೇ ಚಿತ್ರದ ಮಹತ್ವದ ದೃಶ್ಯಗಳು ಮತ್ತು ಫೋಟೋಗಳು ಲೀಕ್ (Leake) ಆಗಿವೆ.

ಈ ಕುರಿತು ಸ್ವತಃ ಶಾರುಖ್ ಖಾನ್ ಸಿನಿಮಾದ ಪ್ರಚಾರಕ್ಕೆ ಬಳಸಿಕೊಳ್ಳಬೇಕಾದ ದೃಶ್ಯ ಮತ್ತು ಫೋಟೋಗಳು ಲೀಕ್ ಆಗುತ್ತಿರುವುದಕ್ಕೆ ಮತ್ತು ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿರುವವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಈ ಸಿನಿಮಾವನ್ನು ತಮ್ಮದೇ ರೆಡ್ ಚಿಲ್ಲೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಶಾರುಖ್ ಖಾನ್, ದೃಶ್ಯಗಳು ಸೋರಿಕೆಯಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಲಿದೆ. ಲೀಕ್ ಮಾಡುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಶಾರುಖ್ ಖಾನ್ ಮನವಿಯನ್ನು ಪುರಸ್ಕರಿಸಿರುವ ದೆಹಲಿ ಹೈಕೋರ್ಟ್ (High Court) , ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿರುವ ದೃಶ್ಯಗಳನ್ನು ಕೂಡಲೇ ಡಿಲಿಟ್ ಮಾಡಬೇಕು ಎಂದು ಆದೇಶ ನೀಡಿದೆ. ಯುಟ್ಯೂಬ್, ವೆಬ್ ಸೈಟ್ ಸೇರಿದಂತೆ ಜವಾನ ದೃಶ್ಯಗಳನ್ನು ಅಪ್ ಲೋಡ್ ಮಾಡಿದವರು ಕೂಡಲೇ ಡಿಲಿಟ್ ಮಾಡಬೇಕು ಎಂದು ಹೈಕೋರ್ಟ್ ಆದೇಶ ಮಾಡಿದೆ .

ಜವಾನ ಬಹುತಾರಾಗಣ ಹೊಂದಿರುವ ಸಿನಿಮಾ. ಶಾರುಖ್ ಜೊತೆ ದೀಪಿಕಾ ಪಡುಕೋಣೆ (Deepika Padukone) ಹಾಗೂ ನಯನತಾರಾ ನಟಿಸಿದ್ದಾರೆ. ಈ ಮೂವರ ಸಂಗಮದ ಮೊದಲ ಸಿನಿಮಾ ಇದಾಗಿದೆ. ಇವರ ಜೊತೆ ಖ್ಯಾತ ತಮಿಳು ನಟ ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!