Monday, July 4, 2022

Latest Posts

ಯುಗಾದಿ ಹಬ್ಬಕ್ಕೆ ಊರಿಗೆ ಹೊರಟ ಕುಟುಂಬಕ್ಕಾಗಿ ದಾರಿ ಮಧ್ಯೆಯೇ ಕಾದಿದ್ದ ಜವರಾಯ! ಅನಾಥವಾದ ಮಗ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಯುಗಾದಿ ಹಬ್ಬವನ್ನು ಆಚರಿಸಲೆಂದು ಬೊಲೆರೋ ಕಾರಿನಲ್ಲಿ ಊರಿಗೆ ಹೊರಟಿದ್ದ ಕುಟುಂಬ ದುರಂತವಾಗಿ ಸಾವಿಗೀಡಾಗಿರುವ ಘಟನೆ ತೆಲಂಗಾಣದ ಆಲಂಪುರದಲ್ಲಿ

ಜೊಗುಲಂಬಾ ಗಾಡ್ವಾಲಾ ಜಿಲ್ಲೆಯ ಇಟಿಕಲ ವಲಯದಲ್ಲಿ  ಮುಂದೆ ಹೋಗುತ್ತಿದ್ದ ಟ್ರಕ್ ಓವರ್ ಟೇಕ್ ಮಾಡಲು ಹೋಗಿ ಬೊಲೆರೋ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಮುರಳಿಮೋಹನ್​ ರೆಡ್ಡಿ (45), ಪತ್ನಿ ಸುಜಾತಾ (40) ಮತ್ತು ಮಗಳು ನೇಹಾ ರೆಡ್ಡಿ (12) ಎಂದು ಗುರುತಿಸಲಾಗಿದೆ. ಮಗ ಸಾಯಿತೇಜರೆಡ್ಡಿ ಅದೃಷ್ಟವಶಾತ್ ಬದುಕುಳಿದಿದ್ದಾನೆ.

ಮುರಳಿಮೋಹನ್​ ಉದ್ಯಮಿಯಾಗಿದ್ದು, ಕೆಲವು ವರ್ಷಗಳಿಂದ ಹೈದರಾಬಾದ್​ ನಲ್ಲಿ ನೆಲೆಸಿದ್ದಾರೆ. ಇವರು ಮೂಲತಃ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಪುಲಿವೆಂದುಲಾ ಮಂಡಲದ ಎರ್ರಪಲ್ಲಾದವರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss