ದಿಗಂತ ವರದಿ ಮೈಸೂರು:
ಸುಮಾರು 6 ಕೋಟಿ ರೂ ವೆಚ್ಚದಲ್ಲಿ ಜಯಲಕ್ಷ್ಮಿ ವಿಲಾಸ ಅರಮನೆಯನ್ನು ಹಂತ,ಹAತವಾಗಿ ದುರಸ್ಥಿ ಕಾರ್ಯ ಮಾಡಿಸಲಾಗುವುದು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ಬುಧವಾರ ಮೈಸೂರಿನ ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಡಿ.ವಿ.ಜಿ.ಬಳಗ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ “ಡಿ.ವಿ.ಜಿ. ಮತ್ತು ಬಿ.ಜಿ.ಎಲ್.ಸ್ವಾಮಿ ಗ್ಯಾಲರಿ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಡಿ.ವಿ.ಜಿ. ಮತ್ತು ಬಿ.ಜಿ.ಎಲ್ ಸ್ವಾಮಿ ಅವರ ಗ್ಯಾಲರಿ ಮಾದರಿಯಲ್ಲಿ ಸುಮಾರು 34 ಸಾಹಿತಿಗಳ ದಾಖಲೆಗಳ ಸಂರಕ್ಷಣೆ ಮಾಡಿ, ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ಎನ್.ತಳವಾರ ಮಾಹಿತಿ ನೀಡಿದ್ದಾರೆ. ಹೀಗಾಗಿ, ಆ ದಾಖಲೆಗಳ ಸಂರಕ್ಷಣೆಗೂ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಒಂದು ಸಂಸ್ಕöÈತಿ ಬಾಳಿ, ಬೆಳಗಬೇಕಾದರೆ ಆ ಸಂಸ್ಕöÈತಿಯ ಪ್ರಾತಃಸ್ಮರಣಿಯರನ್ನು ಜನಸಮುದಾಯದ ನೆನಪಿನಿಂದ ಜಾರದಂತೆ ಮಾಡಬೇಕಾದುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಮಹಾನ್ ಚಿಂತಕರ ಹೊಟ್ಟೆಯಲ್ಲಿ ಮಹಾಮೇಧಾವಿಗಳು ಹುಟ್ಟುವುದು ಅಪರೂಪವಲ್ಲ. ಆದರೆ, ಇದು ಬಹಳ ಸಹಜ ಎಂದು ತೋರಬಹುದಾದರೂ, ಪ್ರತಿಯೊಂದು ತಲೆಮಾರಿನವರೂ ಹೊಸದಾಗಿ ವಿದ್ಯೆಯನ್ನು ಪಡೆದುಕೊಂಡು ಸಾಧನೆ ಮಾಡಬೇಕಾಗುತ್ತದೆ. ತೇಜಸ್ವಿಯವರು ತಮ್ಮ ಸ್ವಂತ ಪರಿಶ್ರಮದಿಂದ ತಮ್ಮದೇ ಹಾದಿಯನ್ನು ಕಂಡುಕೊAಡರು. ದೊಡ್ಡ ಲೇಖಕರಾದರು ಅವರು ಬದುಕಿದ್ದರೆ, ತಜ್ಞರು ಹೇಳುವಂತೆ, ಕನ್ನಡಕ್ಕೆ ಇನ್ನೊಂದು ಜ್ಞಾನಪೀಠ ಪ್ರಶಸ್ತಿಯನ್ನು ದಕ್ಕಿಸುತ್ತಿದ್ದರು. ಇದು ಕನ್ನಡಿಗರಿಗೆ ಆದ ನಷ್ಟ ಎಂದು ಸ್ಮರಿಸಿದರು.
ಡಾ.ಬಿ.ಜಿ.ಎಲ್.ಸ್ವಾಮಿಯವರೂ ಡಿ.ವಿ.ಜಿ.ಯವರ ಶಕ್ತಿಯ ಚೈತನ್ಯದ ಪ್ರತೀಕ. ನಮ್ಮ ವಿವಿಯಲ್ಲಿ ಅವರು ಸಂದರ್ಶಕ ಪ್ರಾಧ್ಯಾಪಕರಾಗಿದ್ದಾಗ ಸರಳವಾಗಿ, ಸಾಮಾನ್ಯ ವ್ಯಕ್ತಿಯಂತೆ ಬೆರೆತು ಬದುಕಿದರು. ತಾನು ಒಬ್ಬ ವಿಶ್ವಪ್ರಸಿದ್ಧ ವಿಜ್ಞಾನಿ ಎಂಬ ಅಹಮಿಕೆ ಅವರಿಗೆ ಕೊಂಚವೂ ಇರಲಿಲ್ಲ ಎಂದು ನೆನೆದರು.
ಸಾಹಿತಿ ತೇಜಸ್ವಿಯವರು, ವಿಜ್ಞಾನದ ವಿಷಯಗಳಿಗೆ ಮಾರುಹೋದಂತೆ ವಿಜ್ಞಾನಿಯಾದ ಬಿ.ಜಿ.ಎಲ್.ಸ್ವಾಮಿಯವರು ಸಾಹಿತ್ಯಕ್ಕೆ ಮಾರುಹೋಗಿದ್ದರು. ಇಡೀ ಕರ್ನಾಟಕದಲ್ಲಿ ಮನೆ ಮಾತಾಗಿದ್ದ ಅಪರೂಪದ ಚಿಂತಕರಾಗಿದ್ದಾರೆ. ಇವರ ನೆನಪನ್ನು ಚಿರಸ್ಥಾಯಿಗೊಳಿಸುವುದರಿಂದ ಮುಂದಿನ ತಲೆಮಾರಿನವರಿಗೆ ಬಹಳ ಉಪಕಾರವಾಗುವುದು ಎಂದು ಹೇಳಿದರು.
ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಎನ್.ಎಸ್ತಾರಾನಾಥ, ಪ್ರೊ.ಸಿ.ಆರ್.ನಾಗೇಂದ್ರನ್, ಬಿ.ಜಿ.ಎಲ್.ಸ್ವಾಮಿಯವರ ಬಂಧು ಗೀತಾ ನಾರಾಯಣ ಅಯ್ಯರ್, ಡಿ.ವಿ.ಜಿ.ಬಳಗ ಪ್ರತಿಷ್ಠಾನದ ಎಚ್.ರಾಜಕುಮಾರ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೆಶಕ ಪ್ರೊ.ಎಂ.ಬಿ.ಮAಜುನಾಥ್, ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ಎನ್.ಎಂ.ತಳವಾರ ಇತರರು ಉಪಸ್ಥಿತರಿದ್ದರು.