ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಿಷತ್ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣಗೆ 2,242 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಎಂ.ಶಂಕರ್ಗೆ 731ಮತಗಳು, ಬಿಜೆಪಿ ಅಭ್ಯರ್ಥಿ ಎಚ್.ಎಂ ವಿಶ್ವನಾಥ್ಗೆ 354 ಮತಗಳು ದೊರಕಿವೆ.
ಮೊದಲ ಯತ್ನದಲ್ಲೇ ಸೂರಜ್ ರೇವಣ್ಣ ಗೆದ್ದು ಬೀಗಿದ್ದಾರೆ, ಈ ಮೂಲಕ ಪರಿಷತ್ ಫಲಿತಾಂಶದಲ್ಲಿ ಜೆಡಿಎಸ್ಗೆ ಮೊದಲ ಗೆಲುವು ಇದಾಗಿದೆ.