Tuesday, July 5, 2022

Latest Posts

ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ :ರಕ್ತ ಬರುವಂತೆ ಹೊಡೆದಾಟ!

ದಿಗಂತ ವರದಿ ರಾಮನಗರ :

ಮತ ಕೇಳುವ ವಿಚಾರವಾಗಿ ಉಂಟಾದಂತ ವಾಗ್ವಾದ ನಂತ್ರ ತಾರಕಕ್ಕೇರಿದ ಗಲಾಟೆಯಲ್ಲಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರಕ್ತ ಬರೋ ಹಾಗೆ ಹೊಡೆದಾಡಿಕೊಂಡಿದ್ದಾರೆ.
ರಾಮನಗರ ಜಿಲ್ಲೆಯ ಬಿಡದಿ ಪುರಸಭೆ ವಾರ್ಡ್ 1ರಲ್ಲಿ ಮತ ಕೇಳುವ ವಿಚಾರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.

ಮಾತಿಗೆ ಮಾತು ಬೆಳೆದು ಎರಡು ಪಕ್ಷದ ಕಾರ್ಯಕರ್ತರ ಜಗಳ ತಾರಕಕ್ಕೇರಿದೆ. ಇದೇ ವಿಚಾರ ದೊಡ್ಡದಾಗಿ ಪರಸ್ಪರ ಕೈ ಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿದ್ದಾರೆ. ಪರಸ್ಪರ ಹೊಡೆದಾಟದಿಂದಾಗಿ ಅನೇಕರು ಗಾಯಗೊಂಡು ರಕ್ತಸ್ತ್ರಾವವಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಪೊಲೀಸರು, ಎರಡು ಪಕ್ಷದ ಕಾರ್ಯಕರ್ತರನ್ನು ತಡೆದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ಮೂಲಕ ತಾರಕಕ್ಕೇರಿದ್ದ ಹೊಡೆದಾಟ ಪೊಲೀಸರ ಮದ್ಯಪ್ರವೇಶದಿಂದ ತಣ್ಣಗಾಗುವಂತೆ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss