Friday, July 1, 2022

Latest Posts

ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ: ಶಾಸಕ ಜಮೀರ್ ಖಾನ್ ಆರೋಪ

ಹೊಸ ದಿಗಂತ ವರದಿ,ಮೈಸೂರು:

ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಎಲ್ಲಾ 25 ಸ್ಥಾನಕ್ಕೂ ಅಭ್ಯರ್ಥಿ ಹಾಕಬೇಕಿತ್ತು. ಆದರೆ ಕೇವಲ 7 ಸ್ಥಾನಕ್ಕೆ ಅಭ್ಯರ್ಥಿ ಹಾಕಿರುವುದು ಅನುಮಾನಸ್ಪದವಾಗಿ ಕಾಣುತ್ತಿದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಟೀಕಿಸಿದ್ದಾರೆ.
ಬುಧವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ವಿಧಾನಪರಿಷತ್ ಚುನಾವಣೆಯಲ್ಲಿ ಜೆ.ಡಿ.ಎಸ್ ಬಿಜೆಪಿ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವ ಸಾಧ್ಯತೆ ಇದೆ. ಕೇವಲ 7 ಸ್ಥಾನ್ಕೆ ಸ್ಪರ್ಧೆ ಮಾಡಿರುವುದನ್ನು ನೋಡಿದರೆ, ಅವರಿಗೆ ಅಭ್ಯರ್ಥಿಗಳು ಇಲ್ಲವಾ.? ಅಭ್ಯರ್ಥಿ ಇಲ್ಲದಿದ್ದರೆ ಇಲ್ಲ ಅಂತ ಸ್ಪಷ್ಟಪಡಿಸಲಿ. ಬಿಜೆಪಿಗೆ ಲಾಭ ಮಾಡಿಕೊಡಲು ಜೆ.ಡಿ.ಎಸ್ ಮಾಡಿರುವ ತಂತ್ರ ಇದು ಎಂದು ನನಗೆ ಅನಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಕೇವಲ ಒಂದAಕಿಯ ಸ್ಥಾನ ಪಡೆಯುತ್ತೆ. ಜೆಡಿಎಸ್ ಗೆ ಯಾವಾಗಲೂ ಕಾಂಗ್ರಸ್ಸೇ ಟಾರ್ಗೆಟ್. ಹಳೆ ಮೈಸೂರು ಭಾಗದಲ್ಲೂ ಕಾಂಗ್ರೆಸ್‌ಗೆ ಒಳ್ಳೆಯ ವಾತಾವರಣ ಇದೆ ಎಂದರು.
ಸಾಯುವವರೆಗೂ ನನ್ನ ಸಿದ್ದರಾಮಯ್ಯ ಸಂಬAಧ ಕೆಡುವುದಿಲ್ಲ:
ಇತ್ತೀಚೆಗೆ ವಿಪಕ್ಷ ನಾಯಕ ಸಿದ್ಧರಾಮಯ್ಯನವರ ಭಾಷಣಕ್ಕೆ ತಮ್ಮ ಬೆಂಬಲಿಗರು ಅಡ್ಡಿಯುಂಟು ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನ ಸಿದ್ದರಾಮಯ್ಯ ಸಂಬAಧ ಸಾಯುವವರೆಗೂ ಕೆಡುವುದಿಲ್ಲ. ಕೆಡಲು ಸಾಧ್ಯವೂ ಇಲ್ಲ. ಅಂದು ಸಿದ್ದರಾಮಯ್ಯ ಭಾಷಣಕ್ಕೆ ನಮ್ಮ ಬೆಂಬಲಿಗರು ಅಡ್ಡಿ ಮಾಡಿಲ್ಲ. ಸಿದ್ದರಾಮಯ್ಯ ಭಾಷಣ ಮೊಟಕುಗೊಳಿಸಿಲ್ಲ. ಚಿತ್ರ ನಟ ದಿವಂಗತ ಪುನೀತ್ ರಾಜ್ ಕುಮಾರ್ ಕಾರ್ಯಕ್ರಮಕ್ಕೆ ಹೋಗಬೇಕಿದ್ದ ಕಾರಣ, 5 ನಿಮಿಷ ಮಾತನಾಡಿ ಹೋಗಿದ್ದಾರೆ. ನನ್ನ ಅನುಪಸ್ಥಿತಿಯಲ್ಲಿ ನನ್ನ ಅಭಿಮಾನಿಗಳು ಜೈಕಾರ ಕೂಗಿದ್ದು ಕಂಡು ಸಿದ್ದರಾಮಯ್ಯ ಖುಷಿಯಾಗಿದ್ದಾರೆ. ಈ ಬಗ್ಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಸಿದ್ದರಾಮಯ್ಯ ಈ ರೀತಿ ಹೊಟ್ಟೆಕಿಚ್ವು ಪಟ್ಟುಕೊಳ್ಳುವ ಮನುಷ್ಯ ಅಲ್ಲ. ಅವರಿಗೆ ಜೊತೆಗಾರರು ಬೆಳೆದರೆ ಸಂತೋಷ ಇದೆ ಎಂದರು.
ಬೆAಗಳೂರಿನಲ್ಲಿ ಮಳೆ ಅವಾಂತರವಾಗಿದ್ದು, ಪರಿಸ್ಥಿತಿ ತಿಳಿಯಲೆಂದು ಸಿಎಂ ನೆಪಮಾತ್ರಕ್ಕೆ ನಗರ ಪ್ರದಕ್ಷಿಣೆ ಮಾಡಿದ್ದಾರೆ. ನೆಪಮಾತ್ರಕ್ಕೆ ಕೆಲವು ರಸ್ತೆಗ ಹೋಗಿ ಬಂದಿದ್ದಾರೆ. ಇದರಿಂದ ಯಾವ ಪ್ರಯೋಜನ ಇಲ್ಲ ಜನರ ಸಂಕಷ್ಟವನ್ನ ಕೇಳಿಲ್ಲ. ನೆರೆಯಿಂದ ಸಂಕಷ್ಟಕ್ಕೆ ಒಳಗಾದವರಿಗೆ ಪರಿಹಾರ ಘೋಷಣೆ ಮಾಡಿಲ್ಲ ಎಂದು ಟೀಕಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss